ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 15 ನೇ ಬ್ರಿಕ್ಸ್( BRICS) ಸಮಾವೇಶದಲ್ಲಿ ಗ್ರೂಪ್ ಫೋಟೋ ತೆಗೆಯುವಾಗ ವೇದಿಕೆಯ ನೆಲದ ಮೇಲೆ ಭಾರತೀಯ ತ್ರಿವರ್ಣ ಧ್ವಜದ ಕಾರ್ಡ್ ಗಮನಿದ್ದು, ಅದರ ಮೇಲೆ ಹೆಜ್ಜೆ ಹಾಕದಂತೆ ನೋಡಿಕೊಂಡಿದ್ದಾರೆ.
ಧ್ವಜದ ಕಾರ್ಡ್ ಎತ್ತಿಕೊಂಡು ತಮ್ಮ ಕಿಸೆಯಲ್ಲಿ ಇಟ್ಟುಕೊಳ್ಳುತ್ತಾರೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಕೂಡಾ ಪ್ರಧಾನಿ ಮೋದಿ ಅವರನ್ನು ಅನುಸರಿಸಿದ್ದಾರೆ.
ಬ್ರಿಕ್ಸ್ ನಾಯಕರು ಸಮಗ್ರ ಅಧಿವೇಶನಗಳಿಗೆ ಆಗಮಿದ್ದು, ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಫೋಟೋದಲ್ಲಿ ಪ್ರತ್ಯೇಕವಾಗಿ ನಿಂತಿದ್ದರು.
ಮುಕ್ತ ಅಧಿವೇಶನದಲ್ಲಿ”BRICS ರಾಷ್ಟ್ರಗಳು ಜಾಗತಿಕ ದಕ್ಷಿಣದ ಹಿತಾಸಕ್ತಿಗಳನ್ನು ಮುನ್ನಡೆಸಬೇಕು ಮತ್ತು ಆರ್ಥಿಕ ಪ್ರಗತಿಯನ್ನು ಅಭಿವೃದ್ಧಿಪಡಿಸುವ ಮೂಲಕ ಹವಾಮಾನ ಕ್ರಮಗಳನ್ನು ಬೆಂಬಲಿಸಲು ತಮ್ಮ ಬದ್ಧತೆಯನ್ನು ಗೌರವಿಸಲು ಕೈಗಾರಿಕೀಕರಣಗೊಂಡ ದೇಶಗಳಿಗೆ ಕರೆ ನೀಡಬೇಕಾಗಿದೆ” ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಹೇಳಿದರು.
ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಭಾಗಿಯಾಗಿದ್ದರು.