Advertisement

ಪ್ರಧಾನಿ ಮೋದಿ ತ್ರಿರಾಷ್ಟ್ರ ಪ್ರವಾಸ ಆರಂಭ: ಪೋರ್ಚುಗಲ್‌ಗೆ ಪ್ರಯಾಣ

11:14 AM Jun 24, 2017 | udayavani editorial |

ವಾಷಿಂಗ್ಟನ್‌ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ತಮ್ಮ ತ್ರಿರಾಷ್ಟ್ರ ಪ್ರವಾಸವನ್ನು ಆರಂಭಿಸಿದ್ದು, ಮೊದಲ ಹಂತವಾಗಿ ಪೋರ್ಚುಗಲ್‌ಗೆ ಪ್ರಯಾಣ ಬೆಳೆಸಿದರು. ಇದೇ ಪ್ರವಾಸದಲ್ಲಿ ಮೋದಿ ಅವರು ಅಮೆರಿಕ ಮತ್ತು ನೆದರ್‌ಲ್ಯಾಂಡ್‌ಗೆ ಕೂಡ ಹೋಗಲಿದ್ದಾರೆ. 

Advertisement

ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸುವುದು ಬಹುನಿರೀಕ್ಷೆಯ ಘಟನೆ ಎನಿಸಲಿದೆ. 

ಸೋಮವಾರ ಅಮೆರಿಕದಲ್ಲಿ ಮೋದಿಗೆ ರತ್ನಗಂಬಳಿಯ ಅದ್ದೂರಿ ಸ್ವಾಗತ ಸಿಗಲಿದೆ; ಶ್ವೇತ ಭವನದಲ್ಲಿ ಟ್ರಂಪ್‌ ಅವರೊಂದಿಗೆ ಭೋಜನ ಸ್ವೀಕರಿಸುವ ವಿಶ್ವದ ಮೊದಲ ನಾಯಕನೆಂಬ ಹೆಗ್ಗಳಿಕೆಯೂ ಮೋದಿ ಪಾಲಿಗೆ ಲಭಿಸಲಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ. 

ಭಾನುವಾರ ರಾತ್ರಿ ಮೋದಿ ಅಮೆರಿಕದ ಕ್ಯಾಪಿಟೋಲ್‌ಗೆ ಆಗಮಿಸುವರು. ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್‌ ಅವರೊಂದಿಗೆ ಮಾತುಕತೆ ನಡೆಸುವರು. ಸೋಮವಾರದ ಮಧ್ಯಾಹ್ನ ಉಭಯ ನಾಯಕರು ಹಲವು ತಾಸುಗಳನ್ನು ಜತೆಯಾಗಿ ಕಳೆಯಲಿದ್ದು ಆ ಸಂದರ್ಭದಲ್ಲಿ ಅವರು ನೇರ ಮಾತುಕತೆ, ನಿಯೋಗ ಮಟ್ಟದ ಮಾತುಕತೆ ನಡೆಸುವರು. ಕೊನೆಯಲ್ಲಿ ಔತಣ ಕೂಟ ನಡೆಯುವುದು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next