Advertisement

ಜನಸಾಮಾನ್ಯರ ಆರೋಗ್ಯ ಕಾಳಜಿ ನಮ್ಮ ಪ್ರಥಮ ಆದ್ಯತೆ: ಪ್ರಧಾನಿ ಮೋದಿ

09:47 AM Jan 27, 2019 | Team Udayavani |

ಮಧುರೈ: ತಮಿಳುನಾಡಿನ ಮಧುರೈನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಕಟ್ಟಡ ಕಾಮಗಾರಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸವನ್ನು ನೆರವೇರಿಸಿದರು. 1,264 ಕೋಟಿ ರೂಪಾಯಿಗಳ ವೆಚ್ಚದ ಯೋಜನೆ ಇದಾಗಿದ್ದು, ತಮಿಳುನಾಡಿನ ಪಾಲಿಗೆ ದಕ್ಕಿರುವ ಅತೀದೊಡ್ಡ ಸೌಲಭ್ಯಗಳಲ್ಲಿ ಏಮ್ಸ್ ಆಸ್ಪತ್ರೆ ಒಂದಾಗಲಿದೆ. 750 ಹಾಸಿಗೆಗಳ ಆಸ್ಪತ್ರೆಯನ್ನು ಇದು ಹೊಂದಲಿದ್ದು, 100 ಎಂ.ಬಿ.ಬಿ.ಎಸ್. ಸೀಟುಗಳ ಕಾಲೇಜು ಸಹ ಇದರಲ್ಲಿ ಒಳಗೊಂಡಿರಲಿದೆ. ಈ ಯೋಜನೆ 2022ರಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.

Advertisement

ತಮಿಳುನಾಡು ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ರಾಜಾಜಿ, ತಂಜಾವೂರು ಮತ್ತು ತಿರುನೆಲ್ವೆಲ್ಲಿಗಳಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯಕೀಯ ವಿಭಾಗಗಳನ್ನೂ ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

‘ಆರೋಗ್ಯ ಸೇವೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಮಹದುದ್ದೇಶವನ್ನು ನಮ್ಮ ಸರಕಾರವು ಹೊಂದಿದೆ. ಇದಕ್ಕಾಗಿ ಎನ್.ಡಿ.ಎ. ಸರಕಾರವು ಆರೋಗ್ಯ ಕ್ಷೇತ್ರಕ್ಕೆ ವಿಶೇಷವಾದ ಒತ್ತನ್ನು ನೀಡುತ್ತಾ ಬಂದಿದೆ. ಇವತ್ತಿನ ದಿನ ತಮಿಳುನಾಡಿನ ವಿವಿಧ ಕಡೆಗಳಲ್ಲಿ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ನನಗೆ ಸಂತೋಷ ನೀಡಿದೆ’ ಎಂದು ಪ್ರಧಾನಿ ಮೋದಿ ಅವರು ತನ್ನ ಭಾಷಣದಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿಯವರು 12 ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನೂ ಸಹ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next