Advertisement

ನನಗೆ ನೀವೇ ಹೈಕಮಾಂಡ್‌

05:50 PM Sep 19, 2018 | Team Udayavani |

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಸುಮಾರು 550 ಕೋಟಿ ರೂ. ವೆಚ್ಚದ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದು, ಕ್ಷೇತ್ರಕ್ಕಾಗಿ ನೀಡಿದ ಕೊಡುಗೆಗಳ ಕುರಿತು ಜನರಿಗೆ ವಿವರವಾದ ಮಾಹಿತಿ ನೀಡಿದ್ದಾರೆ. ನೀವೇ ನನ್ನ “ಮಾಸ್ಟರ್‌’ಗಳಾಗಿದ್ದು, ನನಗೆ ನೀವೇ “ಹೈಕಮಾಂಡ್‌’ ಎಂದೂ ಅವರು ಹೇಳಿದ್ದಾರೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಓರ್ವ ಸಂಸದನಾಗಿ ನಾನು ಕೂಡ 4 ವರ್ಷಗಳಲ್ಲಿ ನನ್ನ ಕ್ಷೇತ್ರಕ್ಕಾಗಿ ಮಾಡಿರುವ ಕೆಲಸಗಳ ಮಾಹಿತಿಯನ್ನು ನಿಮಗೆ ನೀಡಲೇಬೇಕು. ನೀವೇ ನನ್ನ ಮಾಲಕರು. ಹಾಗಾಗಿ, ನಿಮಗಾಗಿ ವೆಚ್ಚ ಮಾಡಿದ ಪ್ರತಿಯೊಂದು ರೂಪಾಯಿ ಬಗ್ಗೆಯೂ ವಿವರ ನೀಡುತ್ತೇನೆ ಎಂದಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next