ಹೊಸದಿಲ್ಲಿ: ದೇಶದ ಮೊದಲ 14 ಲೇನ್‌ಗಳ ಹೆದ್ದಾರಿ ಎಂಬ ಖ್ಯಾತಿಯ ದೆಹಲಿ-ಮೀರತ್ ಎಕ್ಸ್‌ಪ್ರೆಸ್ ವೇ ಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಲೋಕಾರ್ಪಣೆಗೊಳಿಸಿದ್ದಾರೆ.
ದೆಹಲಿಯ ನಿಜಾಮುದ್ದೀನ್ ಸೇತುವೆಯಿಂದ ಉತ್ತರ ಪ್ರದೇಶ ಗಡಿಯ ವರೆಗೆ ಹೆದ್ದಾರಿ ನಿರ್ಮಾಣ ಮಾಡಲಾಗಿದೆ.
ಹೆದ್ದಾರಿಯನ್ನು ಪ್ರಧಾನಿ ಮೋದಿ ಅವರು ಹೆದ್ದಾರಿ ಸಚಿವ ನಿತಿನ್ ಗಡ್ಗರಿ ಅವರೊಂದಿಗೆ ಚಾಲನೆ ನೀಡಿ ಭರ್ಜರಿ ರೋಡ್ ಶೋ ನಡೆಸಿದರು. ರಸ್ತೆ ಯ ಬದಿಯಲ್ಲಿ ಸಾವಿರಾರು ಜನರು ಮೋದಿ ಅವರನ್ನು ಸ್ವಾಗತಿಸಿದರು. ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು.
ಹೆದ್ದಾರಿಯ ಸಂಪೂರ್ಣ ಉದ್ದ 82ಕಿ.ಮೀ. ಮೊದಲ 27.74 ಕಿ.ಮೀ ಮಾತ್ರ 14 ಲೇನ್‌ಗಳಿಂದ ಕೂಡಿದೆ. ಉಳಿದದ್ದು 6 ಲೇನ್‌ಗಳಿಂದ ಕೂಡಿದೆ.
ಎಕ್ಸ್‌ಪ್ರೆಸ್‌ವೇ ಯಿಂದ ಉತ್ತರ ಪ್ರದೇಶ, ಉತ್ತರಾಖಂಡ್‌ಗೆ ವೇಗದ ಮತ್ತು ಸುರಕ್ಷಿತ ಪ್ರಯಾಣ ಸಾಧ್ಯವಾಗಲಿದೆ.
ಸಂಪೂರ್ಣ ಕಾಮಗಾರಿ ಮುಗಿದ ಬಳಿಕ ದೆಹಲಿಯಿಂದ ಮೀರತ್‌ಗೆ ತೆರಳಲು ಕೇವಲ 60 ನಿಮಿಷ ಸಾಕು.