ಜಾರ್ಖಂಡ್: 657 ಎಕರೆ ಪ್ರದೇಶದಲ್ಲಿ 401 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ದಿಯೋಗಢ್ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಜುಲೈ 12) ಉದ್ಘಾಟಿಸಿದರು.
ಇದನ್ನೂ ಓದಿ:ಸ್ಪಾ,ಸಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ: ನೌಕರಿ ಕೊಡಿಸುವುದಾಗಿ ನಂಬಿಸಿ ದಂಧೆಗೆ ಬಳಕೆ
ನೂತನ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಪ್ರಧಾನಿ ಮೋದಿ ಅವರು ಹಸಿರು ಬಾವುಟದ ನಿಶಾನೆ ಮೂಲಕ ದಿಯೋಗಢ್ ನಿಂದ ಕೋಲ್ಕತಾ ಸಂಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿರುವುದಾಗಿ ವರದಿ ತಿಳಿಸಿದೆ.
ದಿಯೋಗಢ್ ವಿಮಾನ ನಿಲ್ದಾಣದ ರನ್ ವೇ 2,500 ಮೀಟರ್ ಗಳಷ್ಟು ಉದ್ದವಾಗಿದ್ದು, ಇಲ್ಲಿ A320 ವಿಮಾನ ಇಳಿಯಲು ಮತ್ತು ಟೇಕ್ ಆಫ್ ಆಗಲು ಅನುಕೂಲ ಕಲ್ಪಿಸಿಕೊಡಲಾಗಿದೆ. 2018ರ ಮೇ 25ರಂದು ಪ್ರಧಾನಿ ಮೋದಿ ಅವರು ದಿಯೋಗಢ್ ವಿಮಾನ ನಿಲ್ದಾಣ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.
ಅಂದು ನಡೆದ ಸಮಾರಂಭದಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಮುಂಬರುವ ದಿನಗಳಲ್ಲಿ ಈ ವಿಮಾನ ನಿಲ್ದಾಣದ ಮೂಲಕ ರಾಂಚಿ, ಪಾಟ್ನಾ ಮತ್ತು ದೆಹಲಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದರು.