Advertisement
ಪ್ಯಾಕೆಟ್ ನೀರು ಮತ್ತು ಮಜ್ಜಿಗೆಯನ್ನು ಸಭೆಯ ಆರಂಭದಿಂದ ಅಂತ್ಯದವರೆಗೂ ವಿತರಿಸಲಾಯಿತು. ಎರಡು ದೊಡ್ಡ ಗೇಟುಗಳಲ್ಲಿ ಮೈದಾನದ ಒಳಗೆ ಬಿಡಲಾಯಿತು. ವಿವಿಐಪಿ, ಮಾಧ್ಯಮ, ಸಾರ್ವಜನಿಕರಿಗೆ ಪ್ರತ್ಯೇಕ ದ್ವಾರಗಲ್ಲಿ ತಪಾಸಣೆ ನಡೆಸಿಯೇ ಒಳಗೆ ಪ್ರವೇಶ ನೀಡಲಾಯಿತು.
ಮೋದಿಯವರು ಆಗಮಿಸಲು ಕೆಲವೇ ನಿಮಿಷ ಬಾಕಿ ಇರುವಾಗಲೂ ಜನತೆ ಬರುತ್ತಲೇ ಇದ್ದರು. ಆದರೆ ಬಲಭಾಗದ ಗೇಟಿನಲ್ಲಿ ಜನರ ಪ್ರವೇಶ ನಿಧಾನವಾಯಿತು. ಇದನ್ನು ಗಮನಿಸಿದ ನಳಿನ್ ಕುಮಾರ್ ಕಟೀಲು ಅವರು ಅಸಾಧಾನಗೊಂಡು ಪೊಲೀಸರು ಮತ್ತು ಗೇಟುಗಳಲ್ಲಿದ್ದ ಸ್ವಯಂ ಸೇವಕರನ್ನುದ್ದೇಶಿಸಿ “ಕೂಡಲೇ ಗೇಟುಗಳನ್ನು ಪೂರ್ಣ ಓಪನ್ ಮಾಡಿ. ಇಲ್ಲವಾದರೆ ಜನ ಹೊರಗೆ ಉಳಿಯುವಂತಾಗುತ್ತದೆ’ಎಂದರು. ಅನಂತರ ಮತ್ತಷ್ಟು ಜನ ಮೈದಾನ ಪ್ರವೇಶಿಸಿದರು. ತಪ್ಪಿಸಿಕೊಂಡ ಬಾಲಕ
ಸಭೆ ಮುಗಿದು ಸಾರ್ವಜನಿಕರು ವಾಪಸಾಗುತ್ತಿದ್ದಂತೆ ಮುಖ್ಯದ್ವಾರದಲ್ಲಿ ಭಾರೀ ಜನದಟ್ಟಣೆ ಉಂಟಾಯಿತು. ಕೆಲವು ಉತ್ಸಾಹಿ ಕಾರ್ಯಕರ್ತರು ಪಕ್ಷದ ಧjಜ, ನಾಯಕರ ಕಟೌಟ್‌ಗಳನ್ನು ತಮ್ಮೊಂದಿಗೆ ಹಿಡಿದುಕೊಂಡು ಹೋಗಲು ಮುಂದಾದಾಗ ಗೊಂದಲ ಉಂಟಾಯಿತು. ಅನಂತರ ಉದ್ಘೋಷಕರು ಧ್ವಜ ಕೀಳದಂತೆ ವಿನಂತಿ ಮಾಡಿದರು. ಈ ನಡುವೆ ಓರ್ವ ಬಾಲಕ ಹೆತ್ತವರಿಂದ ತಪ್ಪಿಸಿಕೊಂಡು ವೇದಿಕೆಯ ಬಳಿ ಇರುವುದಾಗಿ ಘೋಷಿಸಲಾಯಿತು. ಬಳಿಕ ಬಾಲಕ ಹೆತ್ತವರನ್ನು ಸೇರಿದ್ದಾನೆ.
Related Articles
ನರೇಂದ್ರ ಮೋದಿ ಆಗ ಮನಕ್ಕೆ ಕೆಲ ಗಂಟೆಗಳು ಇರುವಾಗಲೇ ನಗರದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕ್ ಮಾಡಲಾಗಿದ್ದ ವಾಹನ ಗಳನ್ನು ಟ್ರಾಫಿಕ್ ಪೊಲೀಸರು ತೆರವು ಗೊಳಿಸಿದ್ದಾರೆ. ಆದರೆ ಪೊಲೀಸರ ಈ ಕ್ರಮಕ್ಕೆ ಜನ ತೀವ್ರವಾಗಿ ಆಕ್ಷೇಪಿಸಿದ್ದಾರೆ!
ನಗರದೊಳಗಿನ ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಪ್ರತಿ 50 ಮೀ. ಅಂತರದಲ್ಲಿ ಪೊಲೀಸರು ಬೆಳಗ್ಗೆಯಿಂದಲೇ ನಿಂತಿದ್ದು, ಬಂದೋಬಸ್ತ್ನಲ್ಲಿ ತೊಡಗಿಸಿಕೊಂಡಿದ್ದರು. ರಸ್ತೆ ಬದಿಯ ಅಂಗಡಿ, ಕಚೇರಿ ವ್ಯವಹಾರಕ್ಕೆ ಬಂದಿದ್ದ ಗ್ರಾಹಕರು ರಸ್ತೆ ಬದಿಯಲ್ಲಿ ವಾಹನ ಪಾರ್ಕ್ ಮಾಡಿ ಹೋಗಿದ್ದರು. ಆದರೆ ಬರುವಾಗ ವಾಹನ ಇರಲಿಲ್ಲ. ಅವುಗಳನ್ನು ಪೊಲೀಸರು ಹೊತ್ತೂಯ್ದಿದ್ದರು. ಬೈಕಿನ ಮಾಲಕರು ಬಂದಾಗ ವಾಹನ ಇಲ್ಲದೇ ಇದ್ದುದಕ್ಕೆ ಆಕ್ರೋಶಗೊಂಡ ಅವರು ಪಾರ್ಕ್ ಮಾಡುವ ಸಂದರ್ಭ ಪೊಲೀಸರು ಪಕ್ಕದಲ್ಲಿಯೇ ಇದ್ದರು. ಆಗಲೇ ಇಲ್ಲಿ ಪಾರ್ಕ್ ಮಾಡಬೇಡಿ ಎಂದಿದ್ದರೆ ನಾವು ಮಾಡುತ್ತಿರಲಿಲ್ಲ. ವಾಹನ ಹಾನಿ ಮಾಡಿದ್ದಾರೆ ಎಂದು ದೂರಿದ್ದಾರೆ.
Advertisement
ಬಿಸಿಲಿಗೆ ಬಾಗದ ಬಿಜೆಪಿಗರುಮಧ್ಯಾಹ್ನ 12.30ರ ಸುಮಾರಿಗೆ ಜನತೆ ಜಮಾವಣೆಗೊಳ್ಳಲಾರಂಭಿಸಿದರು. ಸುಡು ಬಿಸಿಲಿಗೆ ರಕ್ಷಣೆ ನೀಡುವುದಕ್ಕಾಗಿ ಮೈದಾನದ ಒಂದು ಭಾಗಕ್ಕೆ ಶಾಮಿಯಾನ ಹಾಕಲಾಗಿತ್ತು. ಆದರೆ ಮುಕ್ಕಾಲು ಭಾಗದಷ್ಟು ಮೈದಾನ ತೆರೆದೇ ಇತ್ತು. ಮೈದಾನವಿಡೀ ಹರಡಿದ್ದ ಕುರ್ಚಿಗಳು 1.30ರ ವೇಳೆಗೆ ಭರ್ತಿಯಾದವು. ಅನಂತರ ಕೆಲವು ಮಂದಿ ಮೈದಾನದ ಪಕ್ಕ ನಿಂತು ಕಾರ್ಯಕ್ರಮ ವೀಕ್ಷಿಸಿದರು. ಬಿಜೆಪಿ ಚಿಹ್ನೆಯ ಟೋಪಿಗಳು ಬಿಸಿಲಿನಿಂದ ರಕ್ಷಣೆ ನೀಡಿದವು. ಇನ್ನು ಕೆಲವರು ಬಿಸಿಲಿಗೆ ಕುಳಿತು ಕೊನೆಯವರೆಗೂ ಕಾರ್ಯಕ್ರಮ ವೀಕ್ಷಿಸಿದರು. ಕೆಲವು ಯುವಕರು ಮರವೇರಿ ಕಾರ್ಯಕ್ರಮ ವೀಕ್ಷಿಸಿದರು. ರಥಬೀದಿ ಭಾಗಶಃ ಬಂದ್!
ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ನಿರೀಕ್ಷೆಯಲ್ಲಿ ಮಠದ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಆ್ಯಂಬುಲೆನ್ಸ್, ತುರ್ತು ಚಿಕಿತ್ಸೆ, ವಿಶೇಷ ಪೊಲೀಸ್ ಪಡೆ ಮಠದಲ್ಲಿತ್ತು. ಪ್ರಧಾನಿ ಬರುವುದಿಲ್ಲ ಎಂದು ಬಳಿಕ ಗೊತ್ತಾದರೂ ಭದ್ರತೆ ಮುಂದುವರಿಯಿತು. ಬೆಳಗ್ಗೆ ಮಠಕ್ಕೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿತ್ತು. ಮಧ್ಯಾಹ್ನ ಜನ ವಿರಳವಾಗಿದ್ದರು. ಆದರೂ ದರ್ಶನಕ್ಕೆ ತಡೆ ಇರಲಿಲ್ಲ. ರಥಬೀದಿ ಸುತ್ತಮುತ್ತ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಕಪ್ಪು ಅಂಗಿಗೆ ತಡೆ
ಎರಡನೇ ಮುಖ್ಯದ್ವಾರದಲ್ಲಿ ಕಪ್ಪು ಅಂಗಿ/ ಟೀ ಶರ್ಟ್ ಧರಿಸಿದವರಿಗೆ ಪ್ರವೇಶ ನಿರಾಕರಿಸಲಾಯಿತು. ಇದಕ್ಕೆ ಕೆಲವು ಯುವಕರು ಅಸಮಾಧಾನ ವ್ಯಕ್ತಪಡಿಸಿದರು. “ನಾವು ಬಿಜೆಪಿ ಸಾರ್…ನಮ್ಮನ್ನು ಬಿಡಿ..’ ಎಂದು ಕೆಲವರು ವಿನಂತಿ ಮಾಡಿಕೊಂಡರು. ಆದರೆ ಪೊಲೀಸರು ಆದೇಶ ಇದೆ ಎಂದು ಬೇಡಿಕೆ ನಿರಾಕರಿಸಿದರು. ಕೆಲವು ಮಂದಿ ಬಟ್ಟೆ ಬದಲಾಯಿಸಿ ಒಳಗೆ ಪ್ರವೇಶಿಸಿದರು. “ಕಪ್ಪು ಅಂಗಿಯವರು ಪ್ರತಿಭಟನೆ ವ್ಯಕ್ತಪಡಿಸಿದರೆ ಪ್ರಧಾನಿಯವರಿಗೆ ಅಗೌರವ ಸೂಚಿಸಿದಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ನಿರ್ಬಂಧಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು. ಮೊಳಗಿತು ಜೈ ಘೋಷ
ಬೈಕ್‌ಗಳಲ್ಲಿ ಸಾವಿರಾರು ಮಂದಿ ಯುವಕರು ಬರುತ್ತಲೇ ಜೈ ಜೈ ಮೋದಿ, ಜೈ ಜೈ ಯಡಿಯೂರಪ್ಪ ಘೋಷಣೆಗಳನ್ನು ಕೂಗುತ್ತಾ ಬಂದರು. ಅನಂತರ ಮೈದಾನದಲ್ಲಿ ಪದೇ ಪದೇ ಭಾರತ್ ಮಾತಾ ಕಿ ಜೈ, ಜೈ ಜೈ ಮೋದಿ, ವಂದೇ ಮಾತರಂ ಘೋಷಣೆಗಳು ಮೊಳಗುತ್ತಿದ್ದವು. ಮೋದಿಯವರು ಆಗಮಿಸುವ ಮೊದಲು ಸಂಗೀತ ಕಾರ್ಯಕ್ರಮ, ಚೆಂಡೆ ವಾದನ ನಡೆಯಿತು. ವೇದಿಕೆಯಲ್ಲಿದ್ದ ಉತ್ತರ ಪ್ರದೇಶದ ಸಚಿವ ಡಾ| ಮಹೇಂದ್ರ ಸಿಂಗ್ ಅವರು ನರೇಂದ್ರ ಮೋದಿಯವರು ಆಗಮಿಸುವ ಮೊದಲು “ಮೋದಿ…ಮೋದಿ’ ಘೋಷಣೆಗಳನ್ನು ಮತ್ತೆ ಮತ್ತೆ ಹೇಳಿಸಿದರು.