Advertisement
ಗುರುವಾರ ಬಜೆಟ್ ಅಧಿವೇಶನದ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು ವಿಪಕ್ಷಗಳ ವಿರುದ್ಧ ನಿರಂತರ ಗಂಟೆಯ ಕಾಲ ವಾಗ್ಧಾಳಿ ನಡೆಸಿದರು. ತನ್ನ ಸರ್ಕಾರದ ಯೋಜನೆಗಳನ್ನು ಉಲ್ಲೇಖೀಸಿ ಕಾಂಗ್ರೆಸ್ ಸಾಧನೆಯನ್ನು ಪ್ರಶ್ನಿಸಿ ನೇರ ಸವಾಲುಗಳನ್ನು ಹಾಕಿದರು.
Related Articles
Advertisement
ಆರೋಗ್ಯಕರ ಸ್ಫರ್ಧೆ ಇರಲಿ
ಮುಂದಿನ ಚುನಾವಣೆಯಲ್ಲಿ ಆರೋಗ್ಯಕರವಾದ ಸ್ಫರ್ಧೆ ಇರಲಿ ಎನ್ನುವುದು ನನ್ನ ಆಶಯ. 2019ರಲ್ಲಿ ಹೊಸ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅವರು ದೇಶದ ಅಭಿವೃದ್ಧಿಗೆ ಆಕಾರ ನೀಡಲಿದ್ದಾರೆ ಎಂದರು.
ಬಿಸಿ,ಎಡಿ ಹೊಸ ವ್ಯಾಖ್ಯಾನ
ಬಿಸಿ ಎಂದರೆ ‘ಬಿಫೋರ್ ಕಾಂಗ್ರೆಸ್’ಅಲ್ಲಿ ಏನೂ ಆಗಲಿಲ್ಲ, ಎಡಿ ಎಂದರೆ ‘ಆಫ್ಟರ್ ಡೈನಾಸ್ಟಿ’ , ಇಲ್ಲಿ ಎಲ್ಲವೂ ಸಾಧ್ಯವಾಗುತ್ತಿದೆ ಎಂದರು.
ಖರ್ಗೆ ವಿರುದ್ಧವೂ ಕಿಡಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವೂ ಅಸಮಾಧಾನ ಹೊರ ಹಾಕಿದ ಪ್ರಧಾನಿ ಮೋದಿ, ಖರ್ಗೆ ಅವರು ಅಸಮ್ಮತಿಯ ವ್ಯಕ್ತಿ ಎನಿಸುತ್ತದೆ. ಈಗ ಅವರು ಪ್ರತಿಯೊಂದಕ್ಕೂ ಅಸಮ್ಮತಿ ತೋರುತ್ತಿದ್ದಾರೆ ಎಂದರು. ಮಹಾಘಟಬಂಧನ್ ವಿರುದ್ಧವೂ ಆಕ್ರೋಶ
ಮಹಾಘಟಬಂಧನ್ ಕಥೆ ಏನಾಗುತ್ತದೆ ನೋಡಿ, ಒಬ್ಬರ ಮುಖ ಒಬ್ಬರು ನೋಡದವರು ಈಗ ಒಂದಾಗಿದ್ದಾರೆ ಎಂದು ಲೇವಡಿ ಮಾಡಿದರು. ಮಿಲಾವಟ್ ಸರ್ಕಾರಗಳು ದೇಶದ ಪ್ರಗತಿಗೆ ಪೂರಕವಲ್ಲ, ಮಿಲಾವಟ್ ಇನ್ನು ಬರುವುದಿದೆ. ಅದನ್ನು ಇಲ್ಲಿಗೆ ಬರಲು ಬಿಡುವುದಿಲ್ಲ,ಕೋಲ್ಕತಾದಲ್ಲೇ ಒಟ್ಟುಗೂಡಿಸಿಡಿ ಎಂದರು. ಕಾಂಗ್ರೆಸ್ ಮುಕ್ತ ಭಾರತ ಘೋಷಣೆ ನನ್ನದಲ್ಲ ‘ಕಾಂಗ್ರೆಸ್ ಮುಕ್ತ ಭಾರತ ಘೋಷಣೆ’ ನನ್ನದಲ್ಲ. ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಮುಂದಾಗಿದ್ದರು. ನಾನು ಗಾಂಧೀಜಿ ಅವರ ಆಶಯವನ್ನು ಸಾಕಾರಗೊಳಿಸಲು ಮುಂದಾಗಿದ್ದೇನೆ ಎಂದರು.