ಯಾಂಗೂನ್ : ಭಾರತ – ಮ್ಯಾನ್‌ಮಾರ್ ಸಂಬಂಧವು ಬೌದ್ಧ ಧರ್ಮ, ಉದ್ಯಮ, ಬಾಲಿವುಡ್, ಭರತನಾಟ್ಯ ಮತ್ತು ಬರ್ಮಾ ಟೀಕ್ ಆಧರಿಸಿದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಭಯ ದೇಶಗಳ ನಡುವಿನ ಸಂಬಂಧದ ಉದ್ದಗಲ ಆಳವನ್ನು ಸಂಕ್ಷಿಪ್ತವಾಗಿ ಹೇಳಿದರು.
ಮೋದಿ ಅವರಿಂದು ಗುರುವಾರ ಯಾಂಗೂನ್‌ನಲ್ಲಿನ ಶ್ವೆಡಗಾನ್ ಪಗೋಡ ಮತ್ತು ಕಾಲಿ ಬಾರಿ ದೇವಸ್ಥಾನವನ್ನು ಸಂದರ್ಶಿಸಿ ಪೂಜೆ ಅರ್ಪಿಸಿದರು.
ಮೂರು ದಿನಗಳ ಮ್ಯಾನ್‌ಮಾರ್ ಭೇಟಿಯನ್ನು ಇಂದು ಮುಗಿಸಿದ ಪ್ರಧಾನಿ ಮೋದಿ ಇದೀಗ ಭಾರತಕ್ಕೆ ಮರಳುವ ಮಾರ್ಗದಲ್ಲಿ ಇದ್ದಾರೆ.
ಮ್ಯಾನ್‌ಮಾರ್‌ನಲ್ಲಿ ಉಗ್ರರ ಹಿಂಸೆಯನ್ನು ಹತ್ತಿಕ್ಕುವ ದಿಶೆಯಲ್ಲಿ ಭಾರತ ಸರ್ವ ವಿಧದ ನೆರವನ್ನು ಕೊಡಲು ಸಿದ್ಧವಿದೆ ಎಂದು ಮೋದಿ ಹೇಳಿದರು.
ಮ್ಯಾನ್‌ಮಾರ್‌ನ ರಖೈನ್‌ನಲ್ಲಿನ ಬಿಕ್ಕಟ್ಟು ಹಲವಾರು ದಶಕಗಳಿಂದಲೂ ಇದ್ದು ಅದು ವಸಾಹತು ಪೂರ್ವಕ್ಕೆ ಚಾಚಿಕೊಳ್ಳುತ್ತದೆ ಎಂದು ಸೂ ಕಿ ಈ ಸಂದರ್ಭದಲ್ಲಿ ಹೇಳಿದರು.
ರೊಹಿಂಗ್ಯಾ ಮುಸ್ಲಿಮರ ಸಮಸ್ಯೆಯು ಮ್ಯಾನ್‌ಮಾರ್‌ಗೆ ಭಾರೀ ದೊಡ್ಡ ಸವಾಲಾಗಿದೆ ನಾವಿದನ್ನು ನಿಭಾಯಿಸದೇ ಗತ್ಯಂತರವಿಲ್ಲವಾಗಿದೆ ಎಂದು ಸೂ ಕಿ ಹೇಳಿದರು.