Advertisement

ಕೇದಾರನಾಥದಲ್ಲಿ ಪ್ರಧಾನಿ ಮೋದಿ: ವಿಶೇಷ ಉಡುಗೆ ಧರಿಸಿದ ಕಾರಣ ಇಲ್ಲಿದೆ

06:53 PM Oct 21, 2022 | Team Udayavani |

ರುದ್ರಪ್ರಯಾಗ್ : ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಉತ್ತರಾಖಂಡ ಪ್ರವಾಸದಲ್ಲಿದ್ದು, ಮೊದಲು ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಾಬಾ ಕೇದಾರನಾಥದ ಪುಣ್ಯಭೂಮಿಯನ್ನು ತಲುಪಿದ ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುವ ವಿಶೇಷ ಉಡುಗೆಯನ್ನು ಧರಿಸಿ ಗಮನ ಸೆಳೆದಿದ್ದಾರೆ.

Advertisement

ಪ್ರಧಾನಿ ಮೋದಿಯವರು ಕೇದಾರನಾಥ ಪ್ರವಾಸದಲ್ಲಿ ಧರಿಸಿರುವ ಉಡುಪನ್ನು ಚೋಳ ಡೋರಾ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಹಿಮಾಚಲ ಪ್ರದೇಶದ ಕೈಮಗ್ಗ ಉದ್ಯಮದಲ್ಲಿ ತಯಾರಿಸಲಾಗುತ್ತದೆ.

ಪ್ರಧಾನಿ ಮೋದಿ ಹಿಮಾಚಲದ ಚಂಬಾ ಪ್ರವಾಸಕ್ಕೆ ತೆರಳಿದ್ದಾಗ ಮಹಿಳೆಯೊಬ್ಬರು ತಮ್ಮ ಕೈಯಿಂದಲೇ ಈ ಉಡುಪನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಚಂಬಾ ಪ್ರವಾಸದ ವೇಳೆ ಉಡುಪನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ತಣ್ಣನೆಯ ಸ್ಥಳಕ್ಕೆ ಭೇಟಿ ನೀಡಿದಾಗಲೆಲ್ಲಾ ಅದನ್ನು ಧರಿಸುವುದಾಗಿ ಮಹಿಳೆಗೆ ಭರವಸೆ ನೀಡಿದ್ದರು.

ಕೇದಾರನಾಥ ದೇಗುಲವನ್ನು ತಲುಪಿದ ನಂತರ, ಪ್ರಧಾನಿ ಮೋದಿ ತಮ್ಮ ಭರವಸೆಯನ್ನು ಈಡೇರಿಸಿದರು ಮತ್ತು ಇಂದು ಪ್ರಧಾನಿ ಅದೇ ಉಡುಗೆಯನ್ನು ಧರಿಸಿ ಆಗಮಿಸಿದರು. ಈ ಉಡುಪಿನಲ್ಲಿ ಉತ್ತಮ ಕರಕುಶಲತೆ ಇದ್ದು, ಪ್ರಧಾನಿ ವಿಭಿನ್ನವಾಗಿ ಎಲ್ಲರ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next