ನಾಗ್ಪುರ: ದೇಶದ ಆರನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
ಹೊಸ ವಂದೇ ಭಾರತ್ ರೈಲು ನಾಗ್ಪುರ ಮತ್ತು ಬಿಲಾಸ್ಪುರ ನಡುವೆ ಸಾಗುತ್ತದೆ. ಅದರ ಮಾರ್ಗದಲ್ಲಿ ರಾಯ್ಪುರ್, ದುರ್ಗ್ ಮತ್ತು ಗೊಂಡಿಯಾದಲ್ಲಿ ನಿಲುಗಡೆ ಮಾಡುತ್ತದೆ. ಅರೆ-ಹೈ ಸ್ಪೀಡ್ ರೈಲು ಮೇಲೆ ತಿಳಿಸಿದ ನಿಲ್ದಾಣಗಳ ನಡುವೆ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು ಸುಮಾರು ಐದೂವರೆ ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಪ್ರಧಾನಿ ಮೋದಿ ಇದಕ್ಕೂ ಮೊದಲು ಐದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟನೆ ಮಾಡಿದ್ದರು. ಇತ್ತೀಚೆಗೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲನ್ನು ಮೈಸೂರಿನಲ್ಲಿ ಪ್ರಧಾನಿ ಉದ್ಘಾಟಿಸಿದ್ದರು.
ಇದನ್ನೂ ಓದಿ:ದಿಸ್ ಟೈಮ್ ಫಾರ್ ಆಫ್ರಿಕಾ: ಪೋರ್ಚುಗಲ್ ವಿರುದ್ಧ ಮೊರಾಕ್ಕೊ ಜಯವನ್ನು ಸಂಭ್ರಮಿಸಿದ ಶಕೀರಾ
ವಂದೇ ಭಾರತ್ ರೈಲುಗಳು ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುವ ಹೆಚ್ಚು ಸುಧಾರಿತ ರೈಲುಗಳಾಗಿವೆ. ಎಲ್ಲಾ ಕೋಚ್ ಗಳು ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್-ಆಧಾರಿತ ಆಡಿಯೋ-ದೃಶ್ಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನೆಗಾಗಿ ಆನ್-ಬೋರ್ಡ್ ವೈ-ಫೈ ಹಾಟ್‌ಸ್ಪಾಟ್ ಮತ್ತು ಆರಾಮದಾಯಕ ಆಸನಗಳನ್ನು ಹೊಂದಿವೆ.