Advertisement

ಉಡಾನ್‌ ಹಾರಾಟಕ್ಕೆ ಮೋದಿ ಚಾಲನೆ:ದಿಲ್ಲಿ-ಶಿಮ್ಲಾ ದರ ಕೇವಲ 2,500 ರೂ.

12:15 PM Apr 27, 2017 | |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಶಿಮ್ಲಾ – ಹೊಸದಿಲ್ಲಿ  ಪ್ರಯಾಣದ ಪ್ರಪ್ರಥಮ ಉಡಾನ್‌ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿದರು. ಇದರೊಂದಿಗೆ ದಿಲ್ಲಿ – ಶಿಮ್ಲಾ ವಿಮಾನ ಹಾರಾಟವನ್ನು ಪ್ರಯಾಣಿಕರಿನ್ನು ಕೇವಲ 2,500 ರೂ. ವೆಚ್ಚದಲ್ಲಿ ಕೈಗೊಳ್ಳಬಹುದಾಗಿದೆ.

Advertisement

ಪ್ರಾದೇಶಿಕ ವಿಮಾನ ಸಂಪರ್ಕವನ್ನು ಅತ್ಯಂತ ಅಗ್ಗದ ದರದಲ್ಲಿ ಜನಸಾಮಾನ್ಯರಿಗೆ ಕಲ್ಪಿಸಿಸುವ ಕೇಂದ್ರ ಸರಕಾರದ ಉಡಾನ್‌ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲ ಆಚಾರ್ಯ ದೇವವ್ರತ, ಮುಖ್ಯಮಂತ್ರಿ ವೀರಭದ್ರ ಸಿಂಗ್‌, ಕೇಂದ್ರ ಸಚಿವರಾದ ಪಿ ಅಶೋಕ್‌ ಗಜಪತಿ ಆಜು, ಜಯಂತ್‌ ಸಿನ್ಹಾ ಮತ್ತು ಜೆ ಪಿ ನಡ್ಡಾ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕಡಪಾ – ಹೈದರಾಬಾದ್‌ ಮತ್ತು ನಾಂದೇಡ್‌ – ಹೈದರಾಬಾದ್‌ ಉಡಾನ್‌ ಉದ್ಘಾಟನಾ ಹಾರಾಟಕ್ಕೆ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಚಾಲನೆ ನೀಡಿದರು. 

ಮಾರುಕಟ್ಟೆ ಆಧಾರಿತ ವ್ಯವಸ್ಥೆಯ ಮೂಲಕ ಪ್ರಾದೇಶಿಕ ವಿಮಾನ ಯಾನ ಸಂಪರ್ಕವನ್ನು ಕಲ್ಪಿಸುವ ಜಾಗತಿಕ ಯೋಜನೆಯಾಗಿರುವ ಉಡಾನ್‌ ಈ ಬಗೆಯ ಪ್ರಪ್ರಥಮ ಯೋಜನೆಯಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next