Advertisement

ಜನಪ್ರತಿನಿಧಿಯಾಗಿ, ಉನ್ನತ ಹುದ್ದೆ ಅಲಂಕರಿಸಿ 20 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ

02:51 PM Oct 07, 2020 | Nagendra Trasi |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 20 ವರ್ಷಗಳ ದೀರ್ಘಾವಧಿಯಲ್ಲಿ ಯಾವುದೇ ಸೋಲು ಕಾಣದೆ ಯಶಸ್ವಿ ಜನಪ್ರತಿನಿಧಿಯಾಗಿ ಹೊರಹೊಮ್ಮುವ ಮೂಲಕ ಬುಧವಾರ (ಅಕ್ಟೋಬರ್ 07, 2020) ರಾಜಕೀಯ ರಂಗದಲ್ಲಿ ಮತ್ತೊಂದು ಮೈಲಿಗಲ್ಲನ್ನು ನೆಟ್ಟಂತಾಗಿದೆ.

Advertisement

ಭಾರತೀಯ ಜನತಾ ಪಕ್ಷ ತನ್ನದೇ ಪಕ್ಷದ ರಾಜಕೀಯ ಮುಖಂಡರೊಳಗಿನ ಗುದ್ದಾಟದ ನಡುವೆ 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸತತ ಮೂರು ಬಾರಿ ಮುಖ್ಯಮಂತ್ರಿ ಗದ್ದುಗೆ ಏರುವ ಮೂಲಕ ಮೋದಿ ಅವರು ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ ಕೇಂದ್ರದಲ್ಲಿಯೂ ಕಾಂಗ್ರೆಸ್ ಪಾರುಪತ್ಯವನ್ನು ಮೋದಿ ಕೊನೆಗೊಳಿಸಿದ್ದರು.

ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಂದರ್ಭದಲ್ಲಿ ಭುಜ್ ನಲ್ಲಿ ಭೂಕಂಪ ಅಪ್ಪಳಿಸಿತ್ತು. ನಂತರ ರಾಜ್ಯದ ಅಭಿವೃದ್ದಿಗಾಗಿ ಮೋದಿ ಹಲವಾರು ನಿರ್ಧಾರಗಳನ್ನು ಕೈಗೊಂಡಿದ್ದರು. ಮೋದಿ ಅವರ ನಾಯಕತ್ವದಿಂದ ದೇಶದಲ್ಲಿ ಗುಜರಾತ್ ಮಾದರಿ ಬಹು ಜನಪ್ರಿಯವಾಗಿತ್ತು. ಇದರಿಂದಾಗಿ ದೇಶಾದ್ಯಂತ ಮೋದಿ ಅವರ ಜನಪ್ರಿಯತೆ ಹೆಚ್ಚಳವಾಗಿತ್ತು.

2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮೋದಿ ನೇತೃತ್ವದಲ್ಲಿ ಪಕ್ಷ ಪ್ರಚಂಡ ಜಯ ಸಾಧಿಸಿ, ಎರಡನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದರು.

ಕಳೆದ 20ವರ್ಷಗಳಿಂದಲೂ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಗ್ಗಿಲ್ಲ. ಯಾಕೆಂದರೆ ಯಾವಾಗಲೂ ಸವಾಲನ್ನು ಉತ್ತಮವಾಗಿ ಎದುರಿಸುತ್ತಿರುವುದು. ಅಸಾಧ್ಯವಾದದ್ದನ್ನು ಸಾಧಿಸುವ ಛಲ ಹೊಂದಿ ಗುರಿ ಮುಟ್ಟುವ ಗುಣ ಮೋದಿಯವರದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next