Advertisement

ಕನ್ಸರ್ವೇಟಿವ್‌ ಪಕ್ಷಕ್ಕೆ ಭರ್ಜರಿ ಬಹುಮತ; ಲಂಡನ್‌ ಸಂಸತ್ತಿಗೆ 15 ಮಂದಿ ಭಾರತೀಯರು

09:51 AM Dec 14, 2019 | Team Udayavani |

ಯುನೈಟೆಡ್ ಕಿಂಗ್ ಡಮ್: ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಬೋರಿಸ್ ಮತ್ತೊಮ್ಮೆ ಬ್ರಿಟನ್ ಪ್ರಧಾನಿ ಗದ್ದುಗೆಗೆ ಏರುವಂತಾಗಿದೆ.

Advertisement

ಯುನೈಟೆಟ್ ಕಿಂಗ್ ಡಮ್ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೋರಿಸ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಬ್ರಿಟನ್ ಚುನಾವಣೆಯಲ್ಲಿ ಭರ್ಜರಿ ಬಹುಮತದ ಮೂಲಕ ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಏರಿದ ಬೋರಿಸ್ ಗೆ ಅಭಿನಂದನೆಗಳು ಎಂದು ಪ್ರಧಾನಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಬ್ರಿಟನ್ ಸಂಸತ್ ನ ಹೌಸ್ ಆಫ್ ಕಾಮನ್ಸ್ ನ 650 ಸ್ಥಾನಗಳಲ್ಲಿ ಬೋರಿಸ್ ಜಾನ್ಸನ್ ಅವರ ಕನ್ಷರ್ವೇಟಿವ್ ಪಕ್ಷ ಬರೋಬ್ಬರಿ 326 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಬ್ರೆಕ್ಸಿಟ್ ಪರ ಜನಾದೇಶ ಇರುವುದನ್ನು ಖಚಿತಪಡಿಸಿದೆ..ಐತಿಹಾಸಿಕ ಗೆಲುವು ಬ್ರೆಕ್ಸಿಟ್ ಜಾರಿಗೆ ಹೊಸ ಜನಾದೇಶ ಸಿಕ್ಕಂತಾಗಿದೆ ಎಂದು ಬೋರಿಸ್ ಫಲಿತಾಂಶದ ನಂತರ ಪ್ರತಿಕ್ರಿಯೆ ನೀಡಿದ್ದಾರೆ.

ಯುನೈಟೆಡ್ ಕಿಂಗ್ ಡಮ್ ನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಡಪಂಥೀಯ ಲೇಬರ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಅಲ್ಲದೇ ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರನಡೆಯುವ ಬ್ರೆಕ್ಸಿಟ್ ಪ್ರಕ್ರಿಯೆ ಜಾರಿಗೆ ಸುಗಮ ಹಾದಿ ಕಲ್ಪಿಸಿದಂತಾಗಿದೆ.

1975ರಿಂದ 44 ವರ್ಷಗಳ ಕಾಲ ಯುರೋಪಿಯನ್ ಆರ್ಥಿಕ ಒಕ್ಕೂಟದ ಅಂಗವಾಗಿದ್ದ ಬ್ರಿಟನ್, ಯುರೋಪಿಯನ್ ಕೌನ್ಸಿಲ್ ನಿಂದ ಹೊರನಡೆದು ತನ್ನದೇ ಸ್ವಂತ ಆರ್ಥಿಕ ವಹಿವಾಟು ನಡೆಸುವ ನಿರ್ಧಾರಕ್ಕೆ ಬ್ರೆಕ್ಸಿಟ್ ಎಂದು ಹೆಸರಿಸಲಾಗಿತ್ತು.

Advertisement

1987ರಲ್ಲಿ ಮಾರ್ಗರೇಟ್ ಥ್ಯಾಚರ್ ಬಳಿಕ ಕನ್ಸರ್ವೇಟಿವ್ ಪಕ್ಷ ಇದೇ ಮೊದಲ ಬಾರಿಗೆ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ 368 ಸ್ಥಾನಗಳಲ್ಲಿ ಜಯ ಸಾಧಿಸಿದಂತಾಗಿದೆ.

ಲಂಡನ್‌ ಸಂಸತ್ತಿಗೆ 15 ಮಂದಿ ಭಾರತೀಯರು
ಚುನಾವಣೆಯಲ್ಲಿ 15 ಭಾರತೀಯ ಮೂಲದ ಸದಸ್ಯರು ಲಂಡನ್‌ ಸಂಸತ್ತು “ಹೌಸ್‌ ಆಫ್ ಕಾಮನ್ಸ್‌’ಗೆ ಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್‌ ಮತ್ತು ಲೇಬರ್‌ ಪಕ್ಷದಲ್ಲಿ ಸ್ಪರ್ಧಿಸಿದ್ದ ಸುಮಾರುಬ 15 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಡಜನ್‌ ಸದಸ್ಯೆರು ಈ ಬಾರಿಯೂ ಆಯ್ಕೆಯಾಗಿದ್ದು, ಆ ಪಟ್ಟಿಗೆ ಒಂದಷ್ಟು ಹೊಸ ಮುಖಗಳು ಸೇರಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next