ನವ ದೆಹಲಿ : 75 ನೇ ಸ್ವಾತಂತ್ರೋತ್ಸವ ಆಚರಣೆಯನ್ನು ಹಳ್ಳಿ ಮಟ್ಟದಲ್ಲಿ ಮಾಡುವುದಕ್ಕೆ ಯೋಜನೆ ರೂಪಿಸುವಂತೆ ಬಿಜೆಪಿ ಸಂಸದರಿಗೆ ಕರೆ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೇಘವಾಲ್, ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ಪೂರೈಸುತ್ತಿದೆ. 75ನೇ ಸ್ವಾತಂತ್ರೋತ್ಸವದ ಆಚರಣೆ ಸರ್ಕಾರಕ್ಕೆ ಮಾತ್ರ ಸೀಮಿತವಾಗಿರಬಾರದು. ಈ ಸ್ವಾತಂತ್ರ್ಯ ಸಂಭ್ರಮ ಜನರನ್ನೊಳಗೊಂಡ ಆಚರಣೆಯಾಗಬೇಕು ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಈ ಆ್ಯಪ್ ನಲ್ಲಿ ಎಲ್ ಪಿ ಜಿ ಬುಕ್ ಮಾಡಿದರೇ ನಿಮಗೆ ಸಿಗುತ್ತದೆ ಕ್ಯಾಶ್ ಬ್ಯಾಕ್..!
ಪ್ರತಿ ಕ್ಷೇತ್ರದಲ್ಲಿ ಇಬ್ಬರು ಕಾರ್ಯಕರ್ತರನ್ನು ಒಳಗೊಂಡ ತಂಡವನ್ನು ರಚಿಸುವಂತೆ ಸಂಸದರಿಗೆ ಸೂಚಿಸಿದ್ದು, 2047ಕ್ಕೆ ದೇಶ ಸ್ವಾತಂತ್ರ್ಯ ಕಂಢು ನೂರು ವರ್ಷ ಪೂರೈಸುತ್ತದೆ. ನೂರರ ಸ್ವಾತಂತ್ರ್ಯದ ಸಂಭ್ರಮದ ಹೊತ್ತಿಗೆ ದೇಶ ಹೇಗಿರಬೇಕು ಎನ್ನುವುದರ ಬಗ್ಗೆ ಜನಾಭಿಪ್ರಾಯ ಸಂಘ್ರಹಿಸುವಂತೆ ಸೂಚನ ನೀಡಿದ್ದಾರೆ ಎಂದು ಕೂಡ ತಿಳಿಸಿದ್ದಾರೆ.
ಗ್ರಾಮೀಣ ಹಾಗೂ ಹಳ‍್ಳಿ ಮಟ್ಟದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವುದರೊಂದಿಗೆ ಕ್ರೀಡಾ ಕೂಟಗಳನ್ನು ಹಾಗೂ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳೂವಂತೆ ಸಂಸದರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಡಿಜಿಟಲ್ ಸಾಕ್ಷರತೆ ಮೂಡಿಸಲು ಒತ್ತು ನೀಡಬೇಕು. ಇದರಿಂದ ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆಯುವುದಕ್ಕೆ ಸಾಧದ್ಯವಾಗುತ್ತದೆ ಎಂದು ಕೂಡ ತಿಳಿಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ಯಾರಿಗೆ ಪಟ್ಟಾಭಿಷೇಕ?; ಬಿಎಸ್‌ವೈ ಜೊತೆ ನಿರಾಣಿ, ಬೊಮ್ಮಾಯಿ ಎರಡು ಗಂಟೆ ಕಾಲ ಚರ್ಚೆ