Advertisement
ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ಉತ್ತರಾಖಂಡ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಡೆಹರಾಡೂನ್‌ನಿಂದ ಮಿಲಿಟರಿ ಕ್ಯಾಪ್ಟರ್‌ನಲ್ಲಿ ಕೆದಾರನಾಥ ದೇವಾಲಯಕ್ಕೆ ಬಂದಿಳಿದರು. ಈ ವೇಳೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿತ್ತು.
Related Articles
Advertisement
ದೇವಾಯದ ಭೇಟಿ ಬಳಿಕ ಡೆಹರಾಡೂನ್‌ನಲ್ಲಿ ಬಾಬಾ ರಾಮ್‌ದೇವ್ ಒಡೆತನದ ಪತಂಜಲಿ ಉತ್ಪನ್ನಗಳ ಸಂಶೋಧನ ಕೇಂದ್ರಕ್ಕೆ ಚಾಲನೆ ನೀಡಲಿದ್ದಾರೆ.
ಪ್ರವಾಹ ಸಂಭವಿಸಿದ್ದ ಬಳಿಕ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ತಕ್ಷಣ ಭೇಟಿಗೆ ಮುಂದಾಗಿದ್ದರು. ಆದರೆ ಅಂದಿನ ವಿಜಯ್ ಬಹುಗುಣ ನೇತೃತ್ವದ ಉತ್ತರಾಖಂಡದ ಕಾಂಗ್ರೆಸ್ ಸರ್ಕಾರ ಮೋದಿ ಅವರ ಹೆಲಿಕ್ಯಾಪ್ಟರ್ ಇಳಿಯಲು ಅವಕಾಶ ನೀಡಿರಲಿಲ್ಲ. ಭದ್ರತೆಯ ದೃಷ್ಟಿಯಿಂದ ಯಾವುದೇ ಮುಖ್ಯಮಂತ್ರಿಗಳಿಗೆ ಇಳಿಯಲು ಅವಕಾಶ ನೀಡುವುದಿಲ್ಲ ಎಂದು ಬಹುಗುಣ ಹೇಳಿದ್ದರು.
ಮೋದಿ ಅವರು ಆರ್‌ಎಸ್‌ಎಸ್ ಪ್ರಚಾರಕರಾಗಿದ್ದ ವೇಳೆ ಕೇದಾರನಾಥ ದೇವಾಲಯದ ಬಳಿ ಗುಹೆಯೊಂದರಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿದ್ದರು ಎಂದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ.