ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಕಿಡ್ನಿ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ದಾಮೋದರ ದಾಸ್ ಮೋದಿ ಮತ್ತು ಹೀರಾಬೆನ್ ಗೆ ಜನಿಸಿದ ಐದು ಮಕ್ಕಳಲ್ಲಿ ಪ್ರಹ್ಲಾದ್ ಮೋದಿ ನಾಲ್ಕನೆಯವರು. ಅವರು ಗುಜರಾತ್ ನ ಅಹಮದಾಬಾದ್ ನಲ್ಲಿ ಕಿರಾಣಿ ಅಂಗಡಿ ಮತ್ತು ಟೈರ್ ಶೋರೂಮ್ ಹೊಂದಿದ್ದಾರೆ.
ಕಳೆದ ವರ್ಷ ಡಿಸೆಂಬರ್ 27 ರಂದು ಮೈಸೂರು ಬಳಿ ಪ್ರಹ್ಲಾದ್ ಮೋದಿ ಅಪಘಾತಕ್ಕೀಡಾಗಿದ್ದರು. ಅವರು ಕುಟುಂಬ ಸಮೇತ ಬಂಡೀಪುರದಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಅವರ ಕಾರು ಅಪಘಾತಕ್ಕೀಡಾಗಿತ್ತು.
ಇದನ್ನೂ ಓದಿ:ಅಚ್ಚೇ ದಿನ್ ಬರಬೇಕು ಎಂದರೆ ಕೆಆರ್ ಪಿಪಿ ಪಕ್ಷಕ್ಕೆ ಬೆಂಬಲ ನೀಡಿ: ಧರಪ್ಪ ನಾಯಕ
2022 ಆಗಸ್ಟ್ 2 ರಂದು, ಪ್ರಹ್ಲಾದ್ ಮೋದಿ ಅವರು ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ (AIFPSDF) ಹಲವಾರು ಸದಸ್ಯರೊಂದಿಗೆ ಸಂಘಟನೆಯ ವಿವಿಧ ಬೇಡಿಕೆಗಳೊಂದಿಗೆ ನವದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸಿದ್ದರು.