Advertisement

Joe ಬೈಡನ್‌ರನ್ನು ಹಿಂದಿಕ್ಕಿದ ಮೋದಿ!: 9 ಕೋಟಿ ಟ್ವಿಟರ್‌ ಫಾಲೋವರ್ಸ್‌

12:04 AM Jul 20, 2023 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀವ ಫಾಲೋವರ್ಸ್‌ ಇರುವುದು ಗೊತ್ತಿರುವ ವಿಚಾರ.

Advertisement

ಆದರೀಗ ಜಾಲತಾಣಗಳಲ್ಲಿ ಮೋದಿ ಅವರ ಪ್ರಭಾವ ಮತ್ತಷ್ಟು ಹೆಚ್ಚಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನೂ ಮೀರಿಸಿ ಮೋದಿ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗಿದೆ.

ಟ್ವಿಟರ್‌ನಲ್ಲಿ ಅವರ ಹಿಂಬಾಲಕರ ಸಂಖ್ಯೆ ಬರೋಬ್ಬರಿ 9 ಕೋಟಿಗೆ ಏರಿಕೆಯಾಗಿದೆ. ಅಷ್ಟೇ ಅಲ್ಲದೇ ಟ್ವಿಟರ್‌ನಲ್ಲಿ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿರುವ ಭಾರತೀಯ ಎಂಬ ಹೆಗ್ಗಳಿಕೆಗೂ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಅವರ ಅನುಯಾಯಿಗಳ ಸಾಲಿನಲ್ಲಿ ಖುದ್ದು ಟ್ವಿಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್ ಕೂಡ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next