Advertisement

ಒಮಿಕ್ರಾನ್ ಹೆಚ್ಚಳ : ಪ್ರಧಾನಿ ಮೋದಿಯವರ ಯುಎಇ ಪ್ರವಾಸ ಮುಂದೂಡಿಕೆ

08:14 PM Dec 29, 2021 | Team Udayavani |

ಹೊಸದಿಲ್ಲಿ: ಜನವರಿ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಯೋಜಿಸಿದ್ದ ಪ್ರವಾಸವನ್ನು ಮುಂದೂಡಲಾಗಿದೆ ಎಂದು ಬುಧವಾರ ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Advertisement

ಪ್ರಧಾನ ಮಂತ್ರಿಗಳು ಜನವರಿ 6 ರ ನಂತರ ಪ್ರಮುಖ ಗಲ್ಫ್ ರಾಷ್ಟ್ರಕ್ಕೆ ಭೇಟಿ ನಿಗದಿಯಾಗಿತ್ತು, ಕೋವಿಡ್ -19 ರೂಪಾಂತರಿ ಒಮಿಕ್ರಾನ್ ಹೆಚ್ಚುತ್ತಿರುವ ದೃಷ್ಟಿಯಿಂದ ಭೇಟಿಯನ್ನು ಮುಂದೂಡಲಾಗಿದೆ ಮತ್ತು ಇದು ಫೆಬ್ರವರಿಯಲ್ಲಿ ನಡೆಯಬಹುದು ಎಂದು ಹೇಳಲಾಗಿದೆ. ಭಾರತ ಮತ್ತು ಯುಎಇ ಎರಡೂ ರಾಷ್ಟ್ರಗಳಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ.

2022 ರ ವರ್ಷವು ಭಾರತ ಮತ್ತು ಯುಎಇ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50 ನೇ ವಾರ್ಷಿಕೋತ್ಸವವನ್ನು ಗುರುತಿಸುತಿದ್ದು, ಆ ಹಿನ್ನಲೆಯಲ್ಲಿ ಭೇಟಿ ಕೈಗೊಳ್ಳಲು ಮುಂದಾಗಿದ್ದರು. ಭಾರತ ಮತ್ತು ಯುಎಇ ನಡುವಿನ ಬಾಂಧವ್ಯಗಳು ಕಳೆದ ಕೆಲವು ವರ್ಷಗಳಲ್ಲಿ ಪ್ರಮುಖ ಏರಿಳಿತವನ್ನು ಕಂಡಿದ್ದು, ಎರಡೂ ರಾಷ್ಟ್ರಗಳು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಸಮಗ್ರ ಮುಕ್ತ ವ್ಯಾಪಾರ ಒಪ್ಪಂದವನ್ನು ದೃಢಪಡಿಸಲು ಮಾತುಕತೆ ನಡೆಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next