Advertisement

ಪ್ರಧಾನಿ ಮೋದಿ ತಾಯಿ ಆರೋಗ್ಯದಲ್ಲಿ ಸುಧಾರಣೆ

07:07 PM Dec 29, 2022 | Team Udayavani |

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನ ಯು.ಎನ್‌.ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಂಡಿದೆ.

Advertisement

ಪ್ರಧಾನಿ ಮೋದಿ ಅವರ ಅಣ್ಣ ಸೋಮ ಭಾಯಿ ಮೋದಿ ಆಸ್ಪತ್ರೆಗೆ ಭೇಟಿ ನೀಡಿ, ತಾಯಿಯವರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾತನಾಡಿದ ಅವರು, ಗುರುವಾರ ಬೆಳಗ್ಗೆ ದ್ರವಾಹಾರ ಸೇವಿಸಿದ್ದರು. ಅವರ ಸ್ಥಿತಿ ಸುಧಾರಣೆಯಾಗುತ್ತಿದೆ ಎಂದು ಹೇಳಿದ್ದಾರೆ. ನಮ್ಮ ಜತೆಗೆ ಅವರು ಕೈ ಸನ್ನೆಯ ಮೂಲಕ ಮಾತನಾಡಿದ್ದಾರೆ. ಶೀಘ್ರವೇ ಅವರನ್ನು ಡಿ‌ಸ್ಚಾರ್ಜ್‌ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಬುಧವಾರ ಅವರಿಗೆ ಅನಾರೋಗ್ಯ ಉಂಟಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಆಗಮಿಸಿ, ತಾಯಿಯ ಆರೋಗ್ಯ ವಿಚಾರಿಸಿದ್ದರು. ಗಾಂಧಿನಗರದ ರಾಯಸಾನ್‌ ಗ್ರಾಮದಲ್ಲಿ ಪ್ರಧಾನಿ ಮೋದಿ ಅವರ ಕಿರಿಯ ಸಹೋದರ ಪಂಕಜ್‌ ಮೋದಿ ಜತೆಗೆ ಹೀರಾ ಬಾ ವಾಸಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next