Advertisement

ಜಗತ್ತಿನ ಪ್ರಶಂಸಾರ್ಹರ ಪಟ್ಟಿಯಲ್ಲಿ ಪ್ರಧಾನಿ ಮೋದಿ ನಂ.8

08:03 PM Dec 15, 2021 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಕ್ತ ವರ್ಷವೂ “ಜಗತ್ತಿನ ಅತಿ ಮೆಚ್ಚುಗೆ ಪಡೆದ ಪುರುಷರ ಪಟ್ಟಿ’ಯ ಟಾಪ್‌ 10ರೊಳಗಿನ ಸ್ಥಾನ ಪಡೆದಿದ್ದಾರೆ. ಈ ಮೂಲಕ ತಮ್ಮ ಜಾಗತಿಕ ಜನಪ್ರಿಯತೆ ಕುಗ್ಗಿಲ್ಲ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ.

Advertisement

ದತ್ತಾಂಶ ವಿಶ್ಲೇಷಕ ಸಂಸ್ಥೆ YouGov ಸಮೀಕ್ಷೆ ನಡೆಸಿ ಈ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಹಲವು ಜಾಗತಿಕ ಸೆಲೆಬ್ರಿಟಿಗಳು ಹಾಗೂ ಪ್ರಭಾವಿಗಳನ್ನು ಹಿಂದಕ್ಕೆ ತಳ್ಳಿ ಮೋದಿ ಅವರು ಈ ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿದ್ದಾರೆ. ವಿಶೇಷವೆಂದರೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಅವರನ್ನೂ ಮೋದಿ ಹಿಂದಿಕ್ಕಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರು ಜಗತ್ತಿನಲ್ಲೇ ಅತ್ಯಂತ ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿ ಎಂಬ ಖ್ಯಾತಿ ಗಳಿಸಿದ್ದು, ನಂ.1 ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಉದ್ಯಮಿ ಬಿಲ್‌ ಗೇಟ್ಸ್‌ 2ನೇ ಸ್ಥಾನ ಪಡೆದಿದ್ದಾರೆ.

ಟಾಪ್‌ 20ರೊಳಗಿನ ಭಾರತೀಯರು:
ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ಬಾಲಿವುಡ್‌ ಸೂಪರ್‌ಸ್ಟಾರ್‌ಗಳಾದ ಅಮಿತಾಭ್‌ ಬಚ್ಚನ್‌, ಶಾರುಖ್‌ ಖಾನ್‌ ಅವರು ಟಾಪ್‌ 20 ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸುಧಾ ಮೂರ್ತಿ, ಪ್ರಿಯಾಂಕಾ ಪ್ರಶಂಸಾರ್ಹ ಸ್ತ್ರೀಯರು
“ವಿಶ್ವದ ಪ್ರಶಂಸಾರ್ಹ ಮಹಿಳೆಯರ ಪಟ್ಟಿ’ಯಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ, ಕರಾವಳಿಯ ಬೆಡಗಿ, ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಪ್ರಿಯಾಂಕಾ 10ನೇ ಸ್ಥಾನ ಗಳಿಸಿದ್ದು, ಐಶ್ವರ್ಯಾ 13 ಮತ್ತು ಸುಧಾ ಮೂರ್ತಿ 14ನೇ ಸ್ಥಾನ ಪಡೆದಿದ್ದಾರೆ.

Advertisement

ಇದನ್ನೂ ಓದಿ:ಬೆಂಗಳೂರಿಗೆ ಹೊರಟಿದ್ದ ರೈಲಿಗೆ ಹುಸಿ ಬಾಂಬ್‌ ಕರೆ: ಬಂಧನ

ಟಾಪ್‌ 10 ಪುರುಷರು

  1. ಬರಾಕ್‌ ಒಬಾಮ
  2. ಬಿಲ್‌ ಗೇಟ್ಸ್‌
  3. ಕ್ಸಿ ಜಿನ್‌ಪಿಂಗ್‌
  4. ಕ್ರಿಸ್ಟಿಯಾನೋ ರೊನಾಲ್ಡೋ
  5. ಜಾಕಿಚಾನ್‌
  6. ಎಲಾನ್‌ ಮಸ್ಕ್
  7. ಲಯೋನೆಲ್‌ ಮೆಸ್ಸಿ
  8. ನರೇಂದ್ರ ಮೋದಿ
  9. ವ್ಲಾದಿಮಿರ್‌ ಪುಟಿನ್‌
  10. ಜಾಕ್‌ ಮಾ

ಟಾಪ್‌ 10 ಮಹಿಳೆಯರು

  1. ಮಿಶೆಲ್‌ ಒಬಾಮ
  2. ಏಂಜೆಲಿನಾ ಜೂಲಿ
  3. ರಾಣಿ 2ನೇ ಎಲಿಜಬೆತ್‌
  4. ಓಪ್ರಾಹ್‌ ವಿನ್‌ಫ್ರಿ
  5. ಸ್ಕಾರ್ಲೆಟ್‌ ಜೊಹಾನ್ಸನ್‌
  6. ಎಮ್ಮಾ ವಾಟ್ಸನ್‌
  7. ಟೇಲರ್‌ ಸ್ವಿಫ್ಟ್
  8. ಏಂಜೆಲ್‌ ಮರ್ಕೆಲ್‌
  9. ಮಲಾಲಾ ಯೂಸುಫ್ಝೈ
  10. ಪ್ರಿಯಾಂಕಾ ಚೋಪ್ರಾ ಜೋನಾಸ್‌
Advertisement

Udayavani is now on Telegram. Click here to join our channel and stay updated with the latest news.

Next