ದೇವಗಢ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಜು. 12) ಜಾರ್ಖಂಡ್ ಹಾಗೂ ಬಿಹಾರಕ್ಕೆ ಭೇಟಿ ನೀಡಲಿದ್ದಾರೆ.
ಜಾರ್ಖಂಡ್‌ನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ದೇವಗಢದಲ್ಲಿ ಅವರು ಒಟ್ಟು 16,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ವೈದ್ಯನಾಥ ದೇಗುಲಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ದೇಗುಲದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ದಿಯೋಗಢದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನೂ ಉದ್ಘಾಟಿಸಲಿದ್ದಾರೆ.
ನಗರದ ಏಮ್ಸ್‌ನಲ್ಲಿ ನಿರ್ಮಿಸಲಾಗಿರುವ ಒಳರೋಗಿಗಳ ವಿಭಾಗ, ಶಸ್ತ್ರಚಿಕಿತ್ಸಾ ಘಟಕವನ್ನೂ ಲೋಕಾರ್ಪಣೆಗೊಳಿಸಲಿದ್ದಾರೆ.
ಉಳಿದಂತೆ 10,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ರಸ್ತೆಗಳು, 3,000 ಕೋಟಿ ರೂ. ವೆಚ್ಚದ ಶಕ್ತಿ ಮೂಲಸೌಕರ್ಯಗಳನ್ನೂ ಪ್ರಧಾನಿಯವರು ಉದ್ಘಾಟನೆ ಮಾಡಲಿದ್ದಾರೆ. “ವೈದ್ಯನಾಥ ಧಾಮ ಅಭಿವೃದ್ಧಿ’ ಯೋಜನೆ ಅಲ್ಲಿ ನಿರ್ಮಾಣವಾಗಿರುವ ಹಲವಾರು ಉಪಯೋಜನೆಗಳಲ್ಲಿ ಇವೂ ಸೇರಿವೆ.
ನಂತರ ಬಿಹಾರಕ್ಕೆ ತೆರಳಲಿರುವ ಅವರು ಅಲ್ಲಿನ ವಿಧಾನಸಭೆಯ ಕಟ್ಟಡದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಸ್ಥಾಪಿಸಲಾಗಿರುವ ಶತಾಬ್ದಿ ಸ್ಮತಿ ಸ್ತಂಬವನ್ನೂ ಲೋಕಾರ್ಪಣೆಗೊಳಿಸಲಿದ್ದಾರೆ.