Advertisement
ಬಿಳಿ ಕುರ್ತಾ-ಪೈಜಾಮ ಮತ್ತು ಕೇಸರಿ ಬಣ್ಣದ ಹಾಫ್ ಜಾಕೆಟ್ ಧರಿಸಿದ ಪ್ರಧಾನಿ ಮೋದಿ ಅಮಿತ್ ಶಾ ಅವರೊಂದಿಗೆ ಮತಗಟ್ಟೆಗೆ ತೆರಳಿದರು. ಈ ವೇಳೆ ದಾರಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತಿದ್ದು ಮೋದಿ ಬರುತ್ತಿದ್ದಂತೆ ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಬಳಿಕ ಗುಜರಾತ್‌ನ ಅಹಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಗೆ ತೆರಳಿ ಮತ ಚಲಾಯಿಸಿದರು.
ಏತನ್ಮಧ್ಯೆ, ಅಹಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಮತಗಟ್ಟೆಗೆ ತೆರಳುವ ವೇಳೆ ಮತಗಟ್ಟೆಯ ಹೊರಗೆ ಮೋದಿ ಅವರು ಚಿಕ್ಕ ಬಾಲಕಿಯೊಂದಿಗೆ ಫೋಟೋ ತೆಗೆದರು. ಬಳಿಕ ಮಾತನಾಡಿದ ಅವರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸುತ್ತಿರುವ ದೇಶದ ಮತ್ತು ಗುಜರಾತ್‌ನ ಮತದಾರರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದರು. ಇಂದು ಮೂರನೇ ಹಂತದ ಮತದಾನವಾಗಿದ್ದು, ಇನ್ನೂ ನಾಲ್ಕು ಸುತ್ತಿನ ಮತದಾನ ಬಾಕಿ ಇದೆ. ಪ್ರಜಾಪ್ರಭುತ್ವದ ಈ ಮಹಾನ್ ಕಾರ್ಯದಲ್ಲಿ ಭಾಗವಹಿಸಿದ ಎಲ್ಲ ಜನರಿಗೆ ಅಭಿನಂದನೆಗೆ ಅರ್ಹರು ಎಂದು ಮೋದಿ ಹೇಳಿದರು. ಇಂದು ಗುಜರಾತ್‌ನಲ್ಲಿ ಮತ್ತು ದೇಶದ ಎಲ್ಲೆಲ್ಲಿ ಮತದಾನ ನಡೆಯುತ್ತದೋ ಅಲ್ಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಪ್ರಜಾಪ್ರಭುತ್ವದ ಈ ಹಬ್ಬವನ್ನು ಹಬ್ಬವಾಗಿ ಆಚರಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.
Related Articles
Advertisement