ಬೆಂಗಳೂರು: ರಾಜ್ಯದ ಕೋವಿಡ್-19 ಸ್ಥಿತಿಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಚಿವರ ಸಂವಾದ ನಡೆಸಿದರು.
ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ಥ್ ನಾರಾಯಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು.
ದೇಶದಲ್ಲಿ ಅತೀ ಹೆಚ್ಚು ಕೋವಿಡ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಸಂವಾದ ನಡೆಸಿದ್ದಾರೆ. ಸಂವಾದದಲ್ಲಿ ಆರನೇ ರಾಜ್ಯವಾಗಿದ್ದ ಕರ್ನಾಟಕದ ಸರದಿ ಬಂದಾಗ ರಾಜ್ಯದ ಕೋವಿಡ್-19 ಸ್ಥಿತಿಗತಿಯ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ವೈದ್ಯಕೀಯ ಸಚಿವ ಡಾ ಸುಧಾಕರ್ ಮಾಹಿತಿ ನೀಡಿದರು.
ಸಚಿವರಿಗೆ ಕೇವಲ 10 ನಿಮಿಷಗಳ ಕಾಲಾವಕಾಶ ಲಭಿಸಿದ್ದು, ಸಚಿವರುಗಳು ರಾಜ್ಯದ ಸ್ಥಿತಿಗತಿಯ ಬಗ್ಗೆ ವಿವರಣೆ ನೀಡಿದರು. ಮುಖ್ಯವಾಗಿ ಆಂಬ್ಯುಲೆನ್ಸ್ ಬೆಡ್ ಲಭ್ಯತೆ, ಹಾಗೂ ಪ್ಲಾಸ್ಮಾ ಥೆರಫಿ ಬಗ್ಗೆ ಸಚಿವರು ಮಾಹಿತಿ ನೀಡಿದರು.