Advertisement
ವಿಶ್ವದ ಪ್ರಮುಖ 42 ಸಿಇಒಗಳ ಜತೆ ಸಭೆ ನಡೆಸಿದ ಅವರು, ಭಾರತದಲ್ಲಿ ರಾಜಕೀಯ ಪರಿಸ್ಥಿತಿ ಮತ್ತು ನೀತಿ ನಿರೂಪಣೆಗಳಲ್ಲಿ ಸ್ಥಿರತೆ ಇದೆ ಎಂದಿದ್ದಾರೆ. ಸರಕಾರದ ನೀತಿಗಳು ಅಭಿವೃದ್ಧಿ ಮತ್ತು ಪ್ರಗತಿ ಪರವಾಗಿದೆ. ಭಾರತವು ಪ್ರವಾಸೋದ್ಯಮ, ಪ್ಲಾಸ್ಟಿಕ್ ಮರುಬಳಕೆ ಮತ್ತು ತ್ಯಾಜ್ಯ ನಿರ್ವಹಣೆ ಉಪಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.
Related Articles
Advertisement
ಹೋಲಿಕೆ ನಿಲ್ಲಿಸಬೇಕು ಎಂದು ಇಮ್ರಾನ್: ಇಸ್ಲಾಂ ಜತೆಗೆ ಉಗ್ರವಾದವನ್ನು ಹೋಲಿಸುವ ಪ್ರಯತ್ನವನ್ನು ನಾವು ತಡೆಯಬೇಕು ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಹಾಧಿವೇಶನದ ಹಿನ್ನೆಲೆಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಾವ ಧರ್ಮವೂ ಉಗ್ರವಾದ ವನ್ನು ಪೋಷಿಸುವುದಿಲ್ಲ. ಆದರೆ ಬಹುತೇಕ ಎಲ್ಲ ಉಗ್ರವಾದವೂ ರಾಜಕೀಯದೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿದ್ದಾರೆ.
ಹಲವು ನಾಯಕರೊಂದಿಗೆ ಮೋದಿ ಸಭೆ: ನ್ಯೂಜಿಲೆಂಡ್ ಹಾಗೂ ಅರ್ಮೇನಿಯಾ ಸೇರಿದಂತೆ ಹಲವು ದೇಶಗಳ ಮುಖಂಡ ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.
ಉಗ್ರವಾದ ತಡೆ, ರಕ್ಷಣೆಯಲ್ಲಿ ಭಾರತಕ್ಕೆ ನೆರವಾಗುವುದರ ಜತೆಗೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಒದಗಿಸುವ ನಿಟ್ಟಿನಲ್ಲಿ ಭಾರತಕ್ಕೆ ನೆರವು ವಿಚಾರವನ್ನು ಚರ್ಚಿಸಲಾಗಿದೆ. ಅರ್ಮೇನಿಯಾದ ಪ್ರಧಾನಿ ನಿಕೋಲ್ ಪಶಿನ್ಯನ್ ಹಾಗೂ ನ್ಯೂಜಿಲೆಂಡ್‌ನ ಪ್ರಧಾನಿ ಜಸಿಂದಾ ಆರ್ಡೆನ್ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಪುಲ್ವಾಮಾ ಮತ್ತು ಕ್ರೈಸ್ಟ್‌ಚರ್ಚ್ ದಾಳಿಯನ್ನು ಮೋದಿ ಮತ್ತು ಜಸಿಂದಾ ಖಂಡಿಸಿದರು.
ಉಗ್ರನ ಖರ್ಚಿಗೆ ದುಡ್ಡು ಕೇಳಿದ ಪಾಕ್!ಹೊಸದಿಲ್ಲಿ: ಒಂದೆಡೆ ಉಗ್ರವಾದವನ್ನು ನಾವು ಪೋಷಿಸುತ್ತಿಲ್ಲ ಎಂದು ಹೇಳುತ್ತಲೇ ಮತ್ತೂಂದೆಡೆ ಮುಂಬಯಿ ದಾಳಿ ಸಂಚುಕೋರ ಹಫೀಜ್ ಸಯೀದ್ ಪರ ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಲಾಬಿ ನಡೆಸಿದೆ. ಮಾಸಿಕ ವೆಚ್ಚಕ್ಕಾಗಿ ಹಫೀಜ್ ಕುಟುಂಬಕ್ಕೆ ಅಗತ್ಯವಿರುವ ಹಣವನ್ನು ಬ್ಯಾಂಕ್ ಖಾತೆಯಿಂದ ಹಿಂಪಡೆಯಲು ಅವಕಾಶ ಕೊಡುವಂತೆ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಿರುವ ಪಾಕಿಸ್ಥಾನ, ವಿಶ್ವಸಂಸ್ಥೆಯಿಂದ ಅದಕ್ಕೆ ಅನುಮತಿಯನ್ನೂ ಪಡೆದುಕೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಸಯೀದ್‌ನ ಎಲ್ಲ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ ಹಫೀಜ್ ಯಾವುದೇ ಹಣವನ್ನು ಬ್ಯಾಂಕ್ ಖಾತೆಯಿಂದ ಹಿಂಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಮಾಸಿಕ 1.50 ಲಕ್ಷ ಪಾಕ್ ರೂಪಾಯಿ ಹಿಂಪಡೆಯಲು ಅವಕಾಶ ನೀಡುವಂತೆ ಪಾಕಿಸ್ಥಾನದ ಕೋರಿಕೆಗೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಅನುಮತಿ ನೀಡಿದೆ. 900 ಕೋಟಿ ರೂ. ಸಾಲ ಘೋಷಣೆ
ಕೆರಿಬಿಯನ್ ದೇಶಗಳ ಸಮೂಹಕ್ಕೆ 900 ಕೋಟಿ ರೂ. ಸಾಲ ಹಾಗೂ 100 ಕೋಟಿ ರೂ. ಅನುದಾನವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ 100 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದು, ಸೌರ, ನವೀಕರಿಸಬಹುದಾದ ಇಂಧನ ಮತ್ತು ತಾಪಮಾನ ವೈಪರೀತ್ಯ ಸಂಬಂಧಿ ಕಾಮಗಾರಿಗಳಿಗೆ 900 ಕೋಟಿ ರೂ.ಗಳನ್ನು ಸಾಲ ರೂಪದಲ್ಲಿ ನೀಡುವುದಾಗಿ ಹೇಳಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಪ್ರಥಮ ಭಾರತ-ಕೆರಿಕೋಮ್ ನಾಯ ಕರ ಸಮ್ಮೇಳನದಲ್ಲಿ ಭಾಗವಹಿಸಿದ ವೇಳೆ ಅವರು ಈ ಘೋಷಣೆ ಮಾಡಿದ್ದಾರೆ.