Advertisement

ನೂತನ ಸಂಸತ್ ಭವನ; 6.5 ಮೀಟರ್ ಎತ್ತರದ ಬೃಹತ್ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ

02:38 PM Jul 11, 2022 | Team Udayavani |

ನವದೆಹಲಿ: ನೂತನ ಸಂಸತ್ ಭವನದ ಮೇಲ್ಚಾವಣಿಯಲ್ಲಿ ನಿರ್ಮಿಸಲಾದ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಜುಲೈ 11) ಅನಾವರಣಗೊಳಿಸಿದ್ದಾರೆ.

Advertisement

ಇದನ್ನೂ ಓದಿ:ದೇಶದಲ್ಲಿ 25ರಿಂದ 30 ರಷ್ಟು ಮಾತ್ರ ಬಿಜೆಪಿ ಶಾಸಕರ ಸಂಖ್ಯೆಯಿದೆ: ಮಲ್ಲಿಕಾರ್ಜುನ ಖರ್ಗೆ

“ಈ ಲಾಂಛನವನ್ನು ಕಂಚಿನಿಂದ ನಿರ್ಮಿಸಲಾಗಿದ್ದು, ಒಟ್ಟು 9,500 ಕೆಜಿ ತೂಕವಿದ್ದು, 6.5 ಮೀಟರ್ ಎತ್ತರವಿದೆ. ಲಾಂಛನ ನೂತನ ಸಂಸತ್ ಭವನದ ಕೇಂದ್ರ ದ್ವಾರದ ಮೇಲ್ಭಾಗದಲ್ಲಿದೆ. ಲಾಂಛನಕ್ಕೆ ಆಧಾರವಾಗಿ ಸುಮಾರು 6,500 ಕೆಜಿ ತೂಕದ ಉಕ್ಕಿನ ಆವರಣ ಮಾಡಲಾಗಿದೆ.

ನೂತನ ಸಂಸತ್ ಭವನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾರ್ಮಿಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಹನ ನಡೆಸಿರುವುದಾಗಿ ವರದಿ ವಿವರಿಸಿದೆ.

Advertisement

ನೂತನ ಸಂಸತ್ ಕಟ್ಟಡವು ಒಟ್ಟು 64,500 ಚದರ ಅಡಿಗಳಷ್ಟು ವಿಸ್ತೀರ್ಣ ಹೊಂದಿದೆ. ಇದರಲ್ಲಿ ಬೃಹತ್ ಸಂವಿಧಾನ ಹಾಲ್ ಇದ್ದು, ಇದರಲ್ಲಿ ಭಾರತದ ಪ್ರಜಾಪ್ರಭುತ್ವದ ಹಿನ್ನೆಲೆ ಅನಾವರಣಗೊಳ್ಳಲಿದೆ. ಸಂಸತ್ ಸದಸ್ಯರಿಗೆ ವಿಶಾಲ ಹಾಲ್, ಲೈಬ್ರೆರಿ, ಹಲವಾರು ಸಮಿತಿಗಳ ಕೋಣೆಗಳು, ಊಟದ ಹಾಲ್, ವಾಹನ ನಿಲುಗಡೆ ಪ್ರದೇಶ ಸೇರಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next