ನವದೆಹಲಿ: ಕಾಶಿ ನಮ್ಮ ಆಧ್ಯಾತ್ಮಿಕ ಆತ್ಮದ ಸಂಕೇತವಾಗಿದೆ. ಇದು ಭಾರತದ ಪ್ರಾಚೀನತೆ, ಸಂಪ್ರದಾಯ, ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ(ಡಿಸೆಂಬರ್ 13) ವಾರಾಣಸಿಯಲ್ಲಿ 339 ಕೋಟಿ ರೂಪಾಯಿ ವೆಚ್ಚದ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ:ನಾನು ಥಿಯೇಟರ್ ಗೆ ಹೋದವನಲ್ಲ, ಅಪ್ಪು ಹೇಳಿದ್ರಿಂದ ಆ ಸಿನಿಮಾವನ್ನು ನೋಡಿದೆ : ಸಿದ್ದರಾಮಯ್ಯ
ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಮೆಗಾ ಯೋಜನೆಯಿಂದ ವಾರಾಣಸಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿದೆ. ಇದರಿಂದಾಗಿ ಪುರಾತನ ಮತ್ತು ಆಧುನಿಕದ ಸಂಗಮವಾಗಲಿದೆ ಎಂದು ಪ್ರಧಾನಿ ಹೇಳಿದರು.
ಕಾಶಿ ವಿಶ್ವನಾಥನ ಇತಿಹಾಸದಲ್ಲಿ ಹೊಸ ಇತಿಹಾಸ ಬರೆದಂತಾಗಿದೆ. ಕಾಶಿ ವಿಶ್ವನಾಥ್ ಧಾಮ್ ಆವರಣ ಕೇಳವ ಬೃಹತ್ ಭವನವಲ್ಲ, ಆದರೆ ಇದೊಂದು ಭಾರತದ ಸನಾತನ ಸಂಸ್ಕೃತಿಯ ಮತ್ತು ಸಂಪ್ರಾಯಗಳ ಸಂಕೇತವಾಗಿದೆ ಎಂದರು.
ಈ ನಗರ ಹಲವಾರು ಶತಮಾನಗಳಿಂದ ಇದೆ. ಕಾಶಿ ಅನೇಕ ಸಾಮ್ರಾಜ್ಯಗಳ ಏಳಿಗೆ ಮತ್ತು ಅವನತಿ ಕಂಡಿದೆ. ಆದರೆ ಕಾಶಿ ಇದೀಗ ಪರೀಕ್ಷೆಯ ಕಾಲಘಟ್ಟದಲ್ಲಿ ಬಂದು ನಿಂತಿದೆ. ಕಾಶಿ ಅನಂತವಾದುದು, ದೇಶದ ಅಭಿವೃದ್ಧಿಗೆ ಕಾಶಿಯ ಕೊಡುಗೆ ಅನಂತವಾದುದು ಎಂದು ಪ್ರಧಾನಿ ಮೋದಿ ಹೇಳಿದರು.