Advertisement

ಇಂದಿನಿಂದ ಪ್ರಧಾನಿ ಬಾಂಗ್ಲಾ ಪ್ರವಾಸ

01:47 AM Mar 26, 2021 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮಾ.26, 27ರಂದು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಒಂದೂವರೆ ವರ್ಷಗಳ ಮತ್ತು ಕೋವಿಡ್ ಸಮಸ್ಯೆ ಕಾಣಿಸಿಕೊಂಡ ಬಳಿಕ ಪ್ರಧಾನಿಯವರ ಮೊದಲ ವಿದೇಶ ಪ್ರವಾಸ ಇದು.

Advertisement

ಈ ಬಗ್ಗೆ ಗುರುವಾರ ಹೇಳಿಕೆ ನೀಡಿದ ಪ್ರಧಾನಮಂತ್ರಿ, “ಬಾಂಗ್ಲಾದೇಶ  ಪ್ರಧಾನಿ ಶೇಖ್‌ ಹಸೀನಾ ನೀಡಿರುವ ಆಹ್ವಾನದ ಮೇರೆಗೆ ತೆರಳುತ್ತಿದ್ದೇನೆ. ಬಾಂಗ್ಲಾದೇಶದ ಜತೆಗೆ ಭಾರತ ಸಾಂಸ್ಕೃತಿಕ, ಭಾಷಾ ಬಾಂಧವ್ಯಗಳನ್ನು ಹೊಂದಿದೆ. ತುಂಗಿಪಾರಾದಲ್ಲಿರುವ ಬಂಗ ಬಂಧು, ಮುಜಿಬುರ್‌ ರೆಹಮಾನ್‌ ಸಮಾಧಿಗೆ ಭೇಟಿ ನೀಡಿ, ಗೌರವ ಸಲ್ಲಿಸಲು ಕಾತರನಾಗಿದ್ದೇನೆ ಎಂದಿದ್ದಾರೆ.

ಜತೆಗೆ ಜಶೋ ರೇಶ್ವರಿ ಕಾಳಿ ದೇಗುಲಕ್ಕೂ ಭೇಟಿ ನೀಡಲಿದ್ದಾರೆ. ಈ ಭೇಟಿಗೆ ಪೂರಕವಾಗಿಯೇ ಆ ದೇಶದ ಸಂಸ್ಥಾಪಕ  ಮುಜಿಬುರ್‌ ರೆಹಮಾನ್‌ ಅವರಿಗೆ ಮರಣೋ ತ್ತರವಾಗಿ “ಗಾಂಧಿ ಶಾಂತಿ ಪುರಸ್ಕಾರ’ ಪ್ರಕಟಿಸಲಾ ಗಿತ್ತು.  ಪ್ರಧಾನಿ ಮೋದಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಬಂದು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next