Advertisement

PM Modi:ಇಂದು 4 ರಾಜ್ಯಗಳಲ್ಲಿ ಪ್ರವಾಸ

01:05 AM Mar 09, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಸ್ಸಾಂ, ಅರುಣಾ­ಚಲ ಪ್ರದೇಶ, ಪಶ್ಚಿಮ ಬಂಗಾಲ ಮ ತ್ತು ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿ­ದ್ದಾರೆ. 3 ಸಭೆಗಳಲ್ಲಿ ಭಾಗವಹಿ­ಸಲಿದ್ದಾರೆ. ಶುಕ್ರವಾರವೇ ಅಸ್ಸಾಂಗೆ ಆಗಮಿಸಿರುವ ಅವರು ಶನಿವಾರ ಕಾಜಿರಂಗದಲ್ಲಿ ಸಫಾರಿ ನಡೆಸಿದ್ದಾರೆ.

Advertisement

ಅರುಣಾಚಲ ಪ್ರದೇಶಕ್ಕೆ ತೆರಳಿರುವ ಪ್ರಧಾನಿ ಇಟಾನಗರದಲ್ಲಿ ಆಯೋಜಿ­ಸಲಾಗಿರುವ ವಿಕಸಿತ ಭಾರತ-ವಿಕಸಿತ ಈಶಾನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳ­ಲಿ­ದ್ದಾರೆ. 55600 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆ­ಗಳಿಗೆ ಚಾಲನೆ ನೀಡಲಿದ್ದಾರೆ. ಮತ್ತೆ ಅಸ್ಸಾಂನ ಕಾರ್ಯಕ್ರಮದಲ್ಲಿ ಭಾಗವಹಿ­ಸಲಿದ್ದಾರೆ. ಪಶ್ಚಿಮ ಬಂಗಾಲದ ಸಿಲಿಗುರಿಯಲ್ಲಿನ ಕಾರ್ಯ­ಕ್ರಮ­ದಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ. ಅನಂತರ ಉ.ಪ್ರ.ದ ವಾರಾಣಸಿಯ ವಿಶ್ವನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ ರೋಡ್‌ ಶೋ ನಡೆಸಲಿದ್ದಾರೆ.

ನಾಳೆ ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್‌ ಹೊಸ ಟರ್ಮಿನಲ್‌ಗೆ ಶಿಲಾನ್ಯಾಸ
ಹೊಸದಿಲ್ಲಿ: ಪ್ರಧಾನಿ ಮೋದಿ ಅವರು ಮಾ.10, ರವಿವಾರ ಹುಬ್ಬಳ್ಳಿ ಬೆಳಗಾವಿ, ಕಡಪಾ ವಿಮಾನ ನಿಲ್ದಾಣಗಳ ಹೊಸ ಟರ್ಮಿನಲ್‌ಗ‌ಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದಲ್ಲದೆ ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರವಿವಾರ 10 ಸಾವಿರ ಕೋಟಿ ರೂ. ವೆಚ್ಚದ 15 ವಿಮಾನ ನಿಲ್ದಾಣ ಪ್ರಾಜೆಕ್ಟ್ಗಳಿಗೆ ಚಾಲನೆ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next