Advertisement
ಯುಎಇ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ಸಹಯೋಗವನ್ನು ವಿಸ್ತರಿಸುವುದರ ಜತೆಗೆ ವ್ಯೂಹಾತ್ಮಕ ಪಾಲುದಾರಿಕೆ ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ. ಯುಎಇ ಉಪಾಧ್ಯಕ್ಷ, ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕೌ¤ಮ್ ಅವರನ್ನೂ ಭೇಟಿ ಮಾಡಲಿರುವ ಮೋದಿ, ದುಬಾೖ ಯಲ್ಲಿ ನಡೆಯಲಿರುವ ವಿಶ್ವ ಸರಕಾರಿ ಶೃಂಗಸಭೆಯಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡು ವಿಶೇಷ ಭಾಷಣ ಮಾಡಲಿದ್ದಾರೆ. ಬಳಿಕ, ಪ್ರವಾಸದ ಪ್ರಮುಖ ಭಾಗವಾಗಿ ಅಬುಧಾಬಿಯಲ್ಲಿ ನಿರ್ಮಾಣಗೊಂಡಿರುವ ಯುಎಇಯ ಮೊದಲ ಶಿಲಾ ದೇಗುಲ, ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್)ವನ್ನು ಉದ್ಘಾಟಿಸಲಿದ್ದಾರೆ.
ಯುಎಇಯಲ್ಲಿ ಒಟ್ಟು 35 ಲಕ್ಷ ಭಾರತೀಯರಿದ್ದಾರೆ. ದೇಗುಲ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಉಡುಗೊರೆಯಾಗಿ ನೀಡಲು ಅಲ್ಲಿನ 100 ಭಾರತೀಯ ವಿದ್ಯಾರ್ಥಿಗಳು “ಸಣ್ಣ ಶಿಲೆ'(ಟೈನಿ ಟ್ರೆಷ ರ್)ಗಳಿಗೆ ಬಣ್ಣ ಹಚ್ಚಿಟ್ಟುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
Related Articles
ಪ್ರಧಾನಿ ಮೋದಿಯ ಯುಎಇ ಭೇಟಿಯ ಭಾಗವಾಗಿ ಅಬುಧಾಬಿಯ ನ್ಪೋಟ್ಸ್ ಸಿಟಿ ಸ್ಟೇಡಿಯಂನಲ್ಲಿ ಮಂಗಳವಾರ “ಅಹ್ಲಾನ್ ಮೋದಿ’ (ಅರೇಬಿಕ್‌ನಲ್ಲಿ “ಹಲೋ ಮೋದಿ’) ವಿಶೇಷ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಬರೋಬ್ಬರಿ 80 ಸಾವಿರ ಮಂದಿ ಈ ಮೊದಲು ನೋಂದಾಯಿಸಿಕೊಂಡಿದ್ದರು. ಆದರೆ ಇದೇ ದಿನ ಯುಎಇಯಾದ್ಯಂತ ರಾತ್ರಿಯಿಡೀ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯ ಕಾರಣ, ಭಾಗವಹಿಸುವವರ ಸಂಖ್ಯೆಯನ್ನು 35 ಸಾವಿರಕ್ಕೆ ಕಡಿತಗೊಳಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ.
Advertisement