Advertisement

ನಾಳೆ ಪುಣೆಯ ಸಿರಮ್‌ಗೆ ಮೋದಿ; ಆಕ್ಸ್‌ಫ‌ರ್ಡ್‌ ಲಸಿಕೆ ಉತ್ಪಾದನೆ ಪ್ರಗತಿ ಪರಿಶೀಲನೆ

12:38 AM Nov 27, 2020 | mahesh |

ಪುಣೆ: ಕೊರೊನಾ ಲಸಿಕೆ ಸಿದ್ಧಪಡಿಸುತ್ತಿರುವ ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾಕ್ಕೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದು, ನ.28ರಂದು ಪ್ರವಾಸ ನಿಗದಿಗೊಂಡಿದೆ.

Advertisement

ಜಾಗತಿಕ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫ‌ರ್ಡ್‌ ವಿವಿಯ ಅಘಈ1222 ಲಸಿಕೆಯನ್ನು ಸೀರಮ್‌ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯಾ ಪುಣೆ ಯಲ್ಲಿ ಸಿದ್ಧಪಡಿಸುತ್ತಿದೆ. “ಪ್ರಧಾನಿ ಮೋದಿ ಅವರು ಸೀರಮ್‌ ಸಂಸ್ಥೆಗೆ ಶನಿವಾರ ಭೇಟಿ ನೀಡುವ ಮಾಹಿತಿ ನಮಗೆ ಅಧಿಕೃತವಾಗಿ ತಲುಪಿದೆ. ಆದರೆ, ಆ ದಿನದ ಪ್ರಧಾನಿಯವರ ಪ್ರತೀ ನಿಮಿಷಗಳ ಕಾರ್ಯಕ್ರಮ ವೇಳಾಪಟ್ಟಿ ಇನ್ನೂ ಕೈಸೇರಿಲ್ಲ’ ಎಂದು ಪುಣೆ ವಿಭಾ ಗೀಯ ಕಮಿಷನರ್‌ ಸೌರಭ್‌ ರಾವ್‌ ತಿಳಿಸಿದ್ದಾರೆ.

ಭಾರತ್‌ ಬಯೋಗೂ ಭೇಟಿ: ಪ್ರಧಾನಿ ಮೋದಿ ಅವರು ನ. 29ರಂದು ಹೈದರಾಬಾದ್‌ನ ಭಾರತ್‌ ಬಯೋಟೆಕ್‌ಗೂ ಭೇಟಿ ನೀಡಲಿದ್ದಾರೆ.

ಭೇಟಿ ಏಕೆ?: ಎರಡೂ ಸಂಸ್ಥೆಗಳಿಂದ ಪ್ರಧಾನಿ ಲಸಿಕೆ ಉತ್ಪಾದನೆ, ಪ್ರಗತಿಯ ಕುರಿತು ಮಾಹಿತಿ ಪಡೆಯ ಲಿದ್ದಾರೆ. ಲಸಿಕೆ ಲಭ್ಯತೆಯ ಸಮಯ, ಹಂಚಿಕೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ರಾವ್‌ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಡಿ. 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿಷೇಧ ಮುಂದು ವರಿಸಲಾಗಿದೆ.

ಲಸಿಕೆ ಬಗ್ಗೆ ಸಂಶಯ
ಲಂಡನ್‌: ಶೇ.90ರಷ್ಟು ಪರಿಣಾಮಕಾರಿ, 1 ಕಪ್‌ ಕಾಫೀಗಿಂತ ಕಡಿಮೆ ದರ!- ಇಂಥ ಪ್ರಶಂಸೆಗಳ ಮೂಲಕ ಆಕ್ಸ್‌ಫ‌ರ್ಡ್‌- ಅಸ್ಟ್ರಾ ಜೆನೆಕಾ ಲಸಿಕೆ ಪ್ರಶಂಸೆಗಳ ಎವರೆಸ್ಟ್‌ ಏರಿದೆ. ಆದರೆ, ಇದರ ಫ‌ಲಿತಾಂಶದ ಬಗ್ಗೆ ಒಂದೊಂದೇ ಸಂದೇಹ ಸ್ಫೋಟಗೊಳ್ಳುತ್ತಿದೆ. ಲಸಿಕೆ ಶೇ.90, ಶೇ.62ರಷ್ಟು ಪರಿಣಾಮಕಾರಿ ಎಂದು 2 ಹಂತಗಳಲ್ಲಿ ತಿಳಿದುಬಂದಿದೆ. ಅಸ್ಟ್ರಾಜೆನೆಕಾ ಸಂಸ್ಥೆಯು ಅರ್ಧ ಡೋಸ್‌ ಅನ್ನು ಕೇವಲ 2,800 ಮಂದಿ ಮೇಲೆ, ಪೂರ್ಣ ಡೋಸ್‌ ಅನ್ನು 8,900 ಮಂದಿ ಮೇಲೆ ಪ್ರಯೋಗಿಸಿತ್ತು. ಶೇ.90 ಪರಿಣಾಮಕಾರಿ ಎನ್ನುವುದು ಲಸಿಕೆಯನ್ನು ಅರ್ಧ ಡೋಸ್‌ ತೆಗೆದುಕೊಂಡ ನಂತರ ಸಿಕ್ಕಿರುವ ಫ‌ಲಿತಾಂಶ. ಪೂರ್ಣ ಡೋಸ್‌ ಪಡೆದಾಗ ಲಸಿಕೆ ಫ‌ಲಿತಾಂಶ ಭಾರೀ ಕಡಿಮೆ ಹೊರಹೊಮ್ಮಿತ್ತು ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next