Advertisement
ಮೋದಿ ಜು. 8 ಮತ್ತು 9ರಂದು ರಷ್ಯಾ ಹಾಗೂ ಜು. 9, ಜು. 10ರಂದು ಆಸ್ಟ್ರಿಯಾಕ್ಕೆ ಭೇಟಿ ನೀಡಲಿದ್ದಾರೆ. 3ನೇ ಬಾರಿಗೆ ಪ್ರಧಾನಿಯಾದ ಬಳಿಕ ಅವರು ಕೈಗೊಳ್ಳುತ್ತಿರುವ 2ನೇ ವಿದೇಶ ಪ್ರವಾಸ ಇದು. ಇತ್ತೀಚೆಗಷ್ಟೇ ಅವರು ಇಟಲಿ ಪ್ರವಾಸ ಕೈಗೊಂಡಿದ್ದರು. ರಷ್ಯಾ ಪ್ರವಾಸದ ವೇಳೆ ಮೋದಿ ಅವರು 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಆಹ್ವಾನದ ಮೇರೆಗೆ ಅವರು ಈ ಕಾರ್ಯಕ್ರಮದಲ್ಲಿ ಭಾಗ ವಹಿಸುತ್ತಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುತಿನ್ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಗಳು, ಸಮಕಾಲೀನ ಹಾಗೂ ಜಾಗತಿಕ ಸಮಸ್ಯೆಗಳ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ರಷ್ಯಾದ ರಾಜತಾಂತ್ರಿಕ ಅಧಿಕಾರಿ ಡಿಮಿಟ್ರಿ ಪೆಸ್ಕೊವ್ ತಿಳಿಸಿದ್ದಾರೆ. 41 ವರ್ಷದ ಬಳಿಕ ಆಸ್ಟ್ರಿಯಾಕ್ಕೆ ಮೋದಿ
1983ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಳಿಕ ಆಸ್ಟ್ರಿಯಾಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗುತ್ತಿದ್ದಾರೆ.
Related Articles
Advertisement