ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಮ್ಮುವಿಗೆ(ಈ ಹಿಂದೆ ಗಡಿ ಪ್ರದೇಶಗಳಿಗಷ್ಟೇ ತೆರಳಿದ್ದರು) ಭೇಟಿ ನೀಡಲಿದ್ದಾರೆ.
ಬನಿಹಾಲ್- ಖಾಜಿಗುಂಡ್ ನಡುವೆ ಸರ್ವ ಋತುಗಳಲ್ಲೂ ಸಂಪರ್ಕ ಕಲ್ಪಿಸುವಂಥ ರಸ್ತೆ ಸುರಂಗದ ಲೋಕಾರ್ಪಣೆ ಸೇರಿದಂತ ಒಟ್ಟಾರೆ 20 ಸಾವಿರ ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
ಸಾಂಬಾ ಜಿಲ್ಲೆಯ ಪಳ್ಳಿ ಪಂಚಾಯತ್‌ನಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದು, ಅಲ್ಲಿಂದಲೇ ದೇಶಾದ್ಯಂತದ ಗ್ರಾಮ ಸಭಾಗಳನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಇದನ್ನೂ ಓದಿ:ಇನ್‌ಸ್ಟಾಗ್ರಾಮ್ ಲವ್ : ಮದುವೆಯಾಗಿ ಗರ್ಭಿಣಿಯಾದ ಬಳಿಕ ಕೈಕೊಟ್ಟ ಪತಿ
ದೇಶದ ಪ್ರತಿ ಜಿಲ್ಲೆಯಲ್ಲೂ 75 ಜಲಮೂಲಗಳ ಅಭಿವೃದ್ಧಿ ಮತ್ತು ಪುನಶ್ಚೇತನದ ಉದ್ದೇಶದಿಂದ ಪ್ರಧಾನಿ ಮೋದಿ ಅವರು “ಅಮೃತ ಸರೋವರ’ ಎಂಬ ಹೆಸರಿನ ಹೊಸ ಯೋಜನೆಗೂ ಚಾಲನೆ ನೀಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಮೋದಿ ಭೇಟಿ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಾದ್ಯಂತ ಬಿಗಿಭದ್ರತೆ ಕೈಗೊಳ್ಳಲಾಗಿದೆ.