ನವದೆಹಲಿ: ದೇಶೀಯ ಮಟ್ಟದಲ್ಲಿ ಬಾಹ್ಯಾಕಾಶ ವಿಜ್ಞಾನವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು (ಐಎಸ್‌ಪಿಎ) ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಈ ಸಂದರ್ಭದಲ್ಲಿ ಅವರು, ಈ ಕ್ಷೇತ್ರದ ಪರಿಣಿತರು ಹಾಗೂ ಇತರ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಈ ಕಾರ್ಯಕ್ರಮದ ಕುರಿತಂತೆ ಪ್ರಕಟಣೆ ನೀಡಿರುವ ಪ್ರಧಾನಿ ಕಾರ್ಯಾಲಯ (ಪಿಎಂಒ), “ಪ್ರಧಾನಮಂತ್ರಿಯವರ “ಆತ್ಮನಿರ್ಭರ ಭಾರತ’ದ ಪರಿಕಲ್ಪನೆಗೆ ಅನುಗುಣವಾಗಿ ಐಎಸ್‌ಪಿಎ ಸ್ಥಾಪಿಸಲಾಗಿದೆ.
ಇದರಿಂದ ದೇಶೀಯ ಬಾಹ್ಯಾಕಾಶ ವಿಜ್ಞಾನದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಲಿದ್ದು, ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ಭಾರತ ಹೆಚ್ಚು ಸ್ವಾವಲಂಬಿಯಾಗಲು ಪ್ರೇರಣೆ ನೀಡಲಿದೆ” ಎಂದಿದೆ.
ಇದನ್ನೂ ಓದಿ:‘ಜೈ ಮಾತಾ ದಿ’: ವಾರಾಣಸಿ ಪ್ರಚಾರ ಸಭೆಯಲ್ಲಿ ದುರ್ಗೆಯ ಭಜಿಸಿದ ಪ್ರಿಯಾಂಕಾ ಗಾಂಧಿ