Advertisement

ಗುಜರಾತ್ ನಲ್ಲಿ ಇಂದು ಪ್ರಧಾನಿ ಮೋದಿಯಿಂದ ಲೋಕಾರ್ಪಣೆ: ಅಟಲ್ ಸೇತುವೆಯ ವಿಶೇಷತೆ ಏನು?

04:48 PM Aug 27, 2022 | Team Udayavani |

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಗರದಲ್ಲಿರುವ ಸಬರಮತಿ ನದಿ ದಾಟಲು ನೂತನ ನಿರ್ಮಿಸಿದ್ದ ಪ್ರಸಿದ್ಧ ಅಟಲ್ ಸೇತುವೆಯನ್ನು ಶನಿವಾರ (ಆಗಸ್ಟ್ 27) ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

Advertisement

ಇದನ್ನೂ ಓದಿ:ರಾಹುಲ್ ಗಾಂಧಿ ಮೇಲೆ ಆಜಾದ್ ವೈಯಕ್ತಿಕ ದಾಳಿ ಖಂಡನೀಯ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿದ್ದು, ಮೊದಲ ದಿನದ ಭೇಟಿಯ ವೇಳೆ ಇಂದು ಸಂಜೆ ಸಬರಮತಿ ಆಶ್ರಮದ ನದಿಯ ಮುಂಭಾಗದಲ್ಲಿ ಆಯೋಜಿಸಿರುವ ಖಾಸಿ ಉತ್ಸವ್ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಗುಜರಾತ್ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಮ್ದಾವಾಡ್ ಮುನ್ಸಿಪಲ್ ಕಾರ್ಪೋರೇಷನ್ ನಿರ್ಮಾಣ ಮಾಡಿರುವ ಪಾದಚಾರಿಗಳ ಅಟಲ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ಸೇತುವೆಯ ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಸೇತುವೆ ಚಿತ್ರಗಳನ್ನು ಟ್ವೀಟ್ ಮಾಡಿ, ಅಟಲ್ ಸೇತುವೆ ನೋಡಲು ಅದ್ಭುತವಾಗಿಲ್ಲವೇ ಎಂದು ಉಲ್ಲೇಖಿಸಿದ್ದರು.

Advertisement

ಅಟಲ್ ಸೇತುವೆಯ ವಿಶೇಷತೆಗಳೇನು?

*ಈ ಸೇತುವೆ ಕೇವಲ ಪಾದಚಾರಿಗಳ ಉಪಯೋಗಕ್ಕೆ ಮಾತ್ರ. ಇದನ್ನು ಎಲ್ಲಿಸ್ ಸೇತುವೆ ಮತ್ತು ಸರ್ದಾರ್ ಸೇತುವೆ ನಡುವೆ ನಿರ್ಮಿಸಲಾಗಿದೆ.

*ಪ್ರಸಿದ್ಧ ಅಟಲ್ ಬ್ರಿಡ್ಜ್ ಕಣ್ಮನ ಸೂರೆಗೊಳ್ಳುವ ರೀತಿಯ ಡಿಸೈನ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಎಲ್ ಇಡಿ ಕೂಡಾ ಬಳಕೆ ಮಾಡಲಾಗಿದೆ. ಈ ಸೇತುವೆ ಸುಮಾರು 300 ಮೀಟರ್ ಉದ್ದವಿದ್ದು, 14 ಮೀಟರ್ ಅಗಲಿದೆ.

*ಅಟಲ್ ಸೇತುವೆಯನ್ನು 2,600 ಮೆಟ್ರಿಕ್ ಟನ್ ಗಳಷ್ಟು ಸ್ಟೀಲ್ ಪೈಪ್ಸ್ ಉಪಯೋಗಿಸಿ ನಿರ್ಮಾಣ ಮಾಡಲಾಗಿದೆ.

* ಸೇತುವೆ ಮೇಲಿನ ರೂಫ್ ಅನ್ನು ಬಣ್ಣಬಣ್ಣದ ಫ್ಯಾಬ್ರಿಕ್ ನಿಂದ ನಿರ್ಮಿಸಲಾಗಿದೆ. ರೈಲಿಂಗ್ ಅನ್ನು ಗಾಜು ಮತ್ತು ಸ್ಟೈನ್ ಲೆಸ್ ಸ್ಟೀಲ್ ನಿಂದ ನಿರ್ಮಾಣ ಮಾಡಲಾಗಿದೆ.

*ಪಾದಚಾರಿಗಳನ್ನು ಹೊರತು ಪಡಿಸಿ ಅಟಲ್ ಸೇತುವೆಯನ್ನು ಸೈಕಲಿಸ್ಟ್ ಗಳು ಬಳಸಬಹುದಾಗಿದೆ. ಪ್ರವಾಸಿಗರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next