Advertisement
ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿದ ವರ್ಷದಿಂದ ಹಿಡಿದು ಈವರೆಗೂ ಪ್ರತಿವರ್ಷವೂ ಅವರು ದೇಶದ ವಿವಿಧ ಗಡಿಭಾಗದಲ್ಲಿ ಯೋಧರ ಜತೆ ದೀಪಾವಳಿಯನ್ನು ಆಚರಿಸಿದ್ದಾರೆ. ಹೀಗೆ ಅವರು ಪ್ರತಿವರ್ಷ ಯಾವ ಭಾಗದಲ್ಲಿ ದೀಪಾವಳಿ ಆಚರಿಸಿದ್ದಾರೆ ಎಂಬ ಸಂಕ್ತಿಪ್ತ ನೋಟ ಇಲ್ಲಿದೆ.
Related Articles
Advertisement
ಇದನ್ನೂ ಓದಿ:ಒಣ ಹಣ್ಣಿನಿಂದ ಮೂಡಿತು 5 ಕೆ.ಜಿ.ತೂಕದ ದೀಪಾವಳಿಯ ಗೂಡುದೀಪ
2015ರಲ್ಲಿ ಪಂಜಾಬ್ ಗಡಿ:
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ಗಡಿಭಾಗದಲ್ಲಿರುವ ಯೋಧರನ್ನು ಭೇಟಿಯಾಗಿ ಅವರ ಯೋಗ ಕ್ಷೇಮ ವಿಚಾರಿಸುವುದರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು.
2016ರಲ್ಲಿ ಟಿಬೆಟ್ ಗಡಿಭಾಗ:
2016ರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಭಾರತ-ಚೀನಾ ಗಡಿಭಾಗದಲ್ಲಿ ಇಂಡಿಯನ್ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಜೊತೆ ದೀಪಾವಳಿ ಆಚರಿಸುವ ಮೂಲಕ ಸಂಭ್ರಮವನ್ನು ಹಂಚಿಕೊಂಡಿದ್ದರು.
2017ರಲ್ಲಿ ಗ್ಯುರೇಜ್:
2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದ ಗ್ಯುರೇಜ್ ಸೆಕ್ಟರ್ ಗೆ ಭೇಟಿ ನೀಡಿ ಯೋಧರ ಜತೆ ಮಾತುಕತೆ ನಡೆಸಿ, ಸಿಹಿ ಹಂಚುವ ಮೂಲಕ ದೀಪಾವಳಿಯನ್ನು ಆಚರಿಸಿದ್ದರು.
ಇದನ್ನೂ ಓದಿ:ಇರಾನ್ ನಲ್ಲಿ ಇಸ್ರೇಲ್ ಗೂಢಚರರಿಂದ ಅಲ್ ಖೈದಾ ಮುಖ್ಯ ಕಮಾಂಡರ್ ಹತ್ಯೆ: ವರದಿ
2018ರಲ್ಲಿ ಉತ್ತರಾಖಂಡ್:
2018ರಲ್ಲಿಯೂ ಪ್ರಧಾನಿ ಮೋದಿ ಅವರು ಉತ್ತರಾಖಂಡದಲ್ಲಿರುವ ಚೀನಾ ಗಡಿಭಾಗದಲ್ಲಿ ಐಟಿಬಿಪಿ ಯೋಧರ ಜತೆ ಗಡಿಭಾಗದ ಮಾಹಿತಿ ಪಡೆದು, ಕುಶಲೋಪರಿ ವಿಚಾರಿಸಿ ದೀಪಾವಳಿಯನ್ನು ಆಚರಿಸಿಕೊಂಡಿದ್ದರು.
2019ರಲ್ಲಿ ರಜೌರಿ:
ಕಳೆದ ವರ್ಷ ಪ್ರಧಾನಿ ಮೋದಿ ಅವರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನ್ನು ರದ್ದುಪಡಿಸಿದ್ದ ನಂತರ ಮೊದಲ ಬಾರಿಗೆ ರಜೌರಿ ಜಿಲ್ಲೆಯ ಗಡಿಭಾಗಕ್ಕೆ ಭೇಟಿ ನೀಡಿ ಯೋಧರ ಜತೆ ದೀಪಾವಳಿ ಆಚರಿಸಿಕೊಂಡಿದ್ದರು.