Advertisement

ನಟರಾಜ ವಿಗ್ರಹ ಸೇರಿದಂತೆ 157 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ

09:20 AM Sep 26, 2021 | Team Udayavani |

ವಾಷಿಂಗ್ಟನ್: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭೇಟಿಯ ಸಮಯದಲ್ಲಿ ಅಮೆರಿಕವು 157 ಕಲಾಕೃತಿಗಳು ಮತ್ತು ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ಕಂಚಿನ ನಟರಾಜ ಸೇರಿದಂತೆ ಹಲವು ಮೌಲ್ಯಯುತ ಕಲಾಕೃತಿಗಳನ್ನು ಇದು ಒಳಗೊಂಡಿದೆ.

Advertisement

ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಹೋರಾಡಲು ತಮ್ಮ ಪ್ರಯತ್ನಗಳನ್ನು ಬಲಪಡಿಸಲು ಬದ್ಧರಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಬೆಳವಣಿಗೆಯ ಬಳಿಕ ಪ್ರಧಾನ ಮಂತ್ರಿ ಮೋದಿ ಪುರಾತನ ವಸ್ತುಗಳನ್ನು ಭಾರತಕ್ಕೆ ವಾಪಸ್ ಒಯ್ಯಲು ತನ್ನ ಮೆಚ್ಚುಗೆ ವ್ಯಕ್ತಪಡಿಸಿದರು.

10ನೇ ಶತಮಾನದ ರೇವಾಂತ ಕಲ್ಲಿನ ವಿಗ್ರಹ, 12ನೇ ಶತಮಾನದ ತಾಮ್ರದ ನಟರಾಜನ ವಿಗ್ರಹ, 11 ಮತ್ತು 14ನೇ ಶತಮಾನದ ಪುರಾತತ್ವ ವಸ್ತುಗಳು ಕಲಾಕೃತಿಗಳು, ಟೆರಾಕೋಟಾ ಹೂದಾನಿ ಜೊತೆಗೆ 45 ಪ್ರಾಚೀನ ವಸ್ತುಗಳನ್ನು ಅಮೆರಿಕ, ಮೋದಿ ಭೇಟಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ.

ಇದನ್ನೂ ಓದಿ:ತಿಂಗಳಿಗೆ 22 ಲಕ್ಷ ರೂ. ದುಡಿಯುತ್ತಾರೆ ಈ  ಅಣ್ಣ-ತಂಗಿ

ಈ ವಸ್ತುಗಳು ಹೆಚ್ಚಾಗಿ 11 ನೇ ಶತಮಾನದಿಂದ 14 ನೇ ಶತಮಾನದ ಅವಧಿಗೆ ಸೇರಿವೆ. 157 ಕಲಾಕೃತಿಗಳಲ್ಲಿ ಅರ್ಧದಷ್ಟು ಕಲಾಕೃತಿಗಳು (71) ಸಾಂಸ್ಕೃತಿಕವಾದರೆ, ಉಳಿದ ಅರ್ಧವು ಹಿಂದೂ ಧರ್ಮ (60), ಬೌದ್ಧ ಧರ್ಮ (16) ಮತ್ತು ಜೈನ ಧರ್ಮ (9) ಕ್ಕೆ ಸಂಬಂಧಿಸಿದ ಪ್ರತಿಮೆಗಳನ್ನು ಒಳಗೊಂಡಿದೆ.

Advertisement

ಲೋಹ, ಕಲ್ಲು ಮತ್ತು ಟೆರಾಕೋಟಾ ಕಲಾಕೃತಿಗಳು ಮತ್ತು ಪುರಾತನ ವಸ್ತುಗಳನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸುತ್ತಿದೆ. ಕಂಚಿನ ವಿಗೃಹಗಳಾದ ಲಕ್ಷ್ಮಿ ನಾರಾಯಣ, ಬುದ್ಧ, ವಿಷ್ಣು, ಶಿವ ಪಾರ್ವತಿ, ಮತ್ತು 24 ಜೈನ ತೀರ್ಥಂಕರರು, ಕಂಕಲಮೂರ್ತಿ, ಬ್ರಾಹ್ಮಿಯಾ ಮತ್ತು ನಂದಿಕೇಶನ ಪ್ರಸಿದ್ಧ ಭಂಗಿಗಳ ಅಲಂಕೃತ ಪ್ರತಿಮೆಗಳಿವೆ.

ಹಿಂದೂಧರ್ಮದ ಧಾರ್ಮಿಕ ಶಿಲ್ಪಗಳು (ಮೂರು ತಲೆ ಬ್ರಹ್ಮ, ಸೂರ್ಯ ಚಾಲನೆಯ ರಥ, ವಿಷ್ಣು, ದಕ್ಷಿಣಾಮೂರ್ತಿ ಶಿವ, ನೃತ್ಯ ಗಣೇಶ ಇತ್ಯಾದಿ), ಬೌದ್ಧ ಧರ್ಮ (ಸ್ಥಾಯಿ ಬುದ್ಧ, ಬೋಧಿಸತ್ವ ಮಜುಶ್ರೀ, ತಾರಾ) ಮತ್ತು ಜೈನ ಧರ್ಮ (ಜೈನ ತೀರ್ಥಂಕರ, ಪದ್ಮಾಸನ ತೀರ್ಥಂಕರ, ಜೈನ) ಹಾಗೂ ಇತರ ಕಲಾಕೃತಿಗಳಾದ ನಿರಾಕಾರ ದಂಪತಿಗಳು, ಚೌರಿ ಹೊತ್ತವರು, ಡ್ರಮ್ ಬಾರಿಸುವ ಮಹಿಳೆ ಇತ್ಯಾದಿಗಳಿವೆ. ಈ ಕಲಾಕೃತಿಗಳು ಇನ್ನುಮುಂದೆ ಭಾರತದ ಸಂಗ್ರಹಾಲಯದಲ್ಲಿ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next