Advertisement

Watch: ಸ್ವಯಂ ನಿರ್ಬಂಧಕ್ಕೆ ಪ್ರಧಾನಿ ಮೋದಿ ಕರೆ; ಮಾರ್ಚ್ 22ರಂದು ದೇಶಾದ್ಯಂತ ಜನತಾ ಕರ್ಫ್ಯೂ

09:07 PM Mar 19, 2020 | Nagendra Trasi |

ಕೋವಿಡ್-19 ಮಹಾಮಾರಿಗೆ ದೇಶ ತಲ್ಲಣಗೊಂಡಿದೆ. ಐಟಿ, ಬಿಟಿಯಿಂದ ಹಿಡಿದು ಜನಸಾಮಾನ್ಯನಿಗೂ ಕೋವಿಡ್-19 ವೈರಸ್ ಸೋಂಕಿನ ಬಿಸಿ ಮುಟ್ಟಿದೆ. ಈಗಾಗಲೇ ದೇಶದಲ್ಲಿ ಕೋವಿಡ್ ಸೋಂಕು ಪೀಡಿತರ ಸಂಖ್ಯೆ ಏರುತ್ತಿದ್ದು, ಇದಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ 19 ವೈರಸ್ ಮಹಾಮಾರಿ ಭಾರತದಲ್ಲೂ ಕೋಲಾಹಲವನ್ನೆಬ್ಬಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ದೇಶ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಈ ಸಂದರ್ಭದಲ್ಲಿ ದೇಶವಾಸಿಗಳು ತಮಗೆ ಸ್ವಯಂ ನಿರ್ಬಂಧವನ್ನು ವಿಧಿಸಿಕೊಳ್ಳುವ ಮೂಲಕ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ತಮ್ಮ ಯೋಗದಾನವನ್ನು ನೀಡಬೇಕು ಎಂದು ಪ್ರಧಾನಿಯವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next