Advertisement

ಇಂದು ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

08:26 AM Apr 27, 2020 | Mithun PG |

ನವದೆಹಲಿ: ಪ್ರಧಾನಿ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾರತದಲ್ಲಿ ಕೋವಿಡ್ 19  ವೈರಸ್​ ಆರ್ಭಟ ಮುಂದುವರಿದಿದ್ದು  ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪುವವರ ಸಂಖ್ಯೆ  ಏರುತ್ತಲೇ ಇದೆ. ಇದರ ಕುರಿತಾಗಿ ಪ್ರಧಾನಿ ಇಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Advertisement

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿ  ಮೇ 3ರವರೆಗೂ ಲಾಕ್​​ಡೌನ್​​ ವಿಸ್ತರಿಸಿ ಆದೇಶಿಸಿದ್ದಾರೆ. ಮಾತ್ರವಲ್ಲದೆ ಕೋವಿಡ್  ಕುರಿತಂತೆ ಆಗ್ಗಾಗ ಜನರನ್ನುದ್ದೇಶಿಸಿ ಮಾತಾಡುತ್ತಿರುತ್ತಾರೆ. ಇಂದಿನ ಕಾರ್ಯಕ್ರಮದಲ್ಲಿ ಕೋವಿಡ್ -19 ಮಾಹಾಮಾರಿ ವಿರುದ್ಧದ ಹೋರಾಟದ ಪ್ರಗತಿ ಮತ್ತು ಮುಂದಿನ ಹಾದಿಯ ಕುರಿತು ಅವರ ಅಭಿಪ್ರಾಯಗಳನ್ನು  ಜನರಿಗೆ ತಿಳಿಸುವ ನಿರೀಕ್ಷೆಯಿದೆ.

ಮನ್ ಕೀ ಬಾತ್ ಕಾರ್ಯಕ್ರಮ  ಆಕಾಶವಾಣಿಯ ಎಲ್ಲಾ ಜಾಲಗಳಲ್ಲಿ, ದೂರದರ್ಶನ ಮತ್ತು ವೆಬ್​ಸೈಟ್​, ನ್ಯೂಸ್​​ ಆನ್​​  ಎಐಆರ್​ ಆ್ಯಪ್​​ನಲ್ಲೂ ಪ್ರಸಾರವಾಗಲಿದೆ.

ಕಳೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ( ಮಾರ್ಚ್ 29) ಪ್ರಧಾನಿ ಮೋದಿ  ದೇಶದಲ್ಲಿ ಲಾಕ್ ಡೌನ್ ವಿಧಿಸಿದಕ್ಕಾಗಿ ಜನರನ್ನು  ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಮಾತ್ರವಲ್ಲದೆ ಲಾಕ್ ಡೌನ್ ನಿಂದಾಗುವ ಒಳಿತುಗಳ ಕುರಿತು ಮನವರಿಕೆ ಮಾಡಿ ಕೊಟ್ಟಿದ್ದರು.

ಕೋವಿಡ್ 19 ವೈರಸ್​​ ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಲಾಕ್​​ಡೌನ್​​​​​ ವಿಸ್ತರಿಸುವ ಕುರಿತಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು 20.3 ಕೋಟಿ ಮಂದಿ ವೀಕ್ಷಿಸಿದ್ಧಾರೆ ಎಂದು ಬ್ರಾಡ್​​ಕಾಸ್ಟ್​​ ಆಡಿಯನ್ಸ್​ ರೀಸರ್ಚ್​​ ಕೌನ್ಸಿಲ್​​(ಬಿಎಆರ್​​ಸಿ) ತಿಳಿಸಿತ್ತು. ಏಪ್ರಿಲ್​​​ 14ನೇ ತಾರೀಕಿನಂದು ಮಾಡಿದ ಮೋದಿಯವರ 21 ನಿಮಿಷಗಳ ಲಾಕ್​ಡೌನ್​​ ಭಾಷಣವನ್ನು 199 ನ್ಯೂಸ್​​ ಚಾನೆಲ್​​ಗಳ ಮೂಲಕ 20 ಕೋಟಿ ಮಂದಿ ನೋಡಿದ್ದರು.

Advertisement

ಪ್ರಧಾನಿ ನರೇಂದ್ರ ಮೋದಿಯವರ ಏಪ್ರಿಲ್​​ 14ರ ಲಾಕ್​ಡೌನ್​​ ಭಾಷಣವೂ ಮಾರ್ಚ್​​​ ತಿಂಗಳ ಭಾಷಣದ ವೀಕ್ಷಕರ ಸಂಖ್ಯೆಯನ್ನು ಮೀರಿಸಿತ್ತು. ಮೊದಲ ಬಾರಿಗೆ 21 ದಿನಗಳ ಕಾಲ ಲಾಕ್​​ಡೌನ್​​ ಬಗ್ಗೆ ಮಾಡಿದ್ದ ಹಿಂದಿನ ಭಾಷಣವೂ ಆಗ 201 ವಾಹಿನಿಗಳ ಮೂಲಕ 19.7 ಕೋಟಿ ಮಂದಿಯನ್ನು ತಲುಪಿತ್ತು. ಇದಕ್ಕೂ ಮುನ್ನ ಮಾಡಲಾಗಿದ್ದ ಜನತಾ ಕರ್ಫ್ಯೂ ಭಾಷಣವನ್ನು 8.3 ಕೋಟಿ ಪ್ರೇಕ್ಷಕರು ವೀಕ್ಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next