Advertisement
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಉತ್ತರಿಸಿ ವಿಪಕ್ಷಗಳ ಮೇಲೆ ಕಿಡಿ ಕಾರಿದರು.
Related Articles
Advertisement
’60 ವರ್ಷಗಳ ನಂತರ ಸರಕಾರವೊಂದು ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸರಕಾರ 10 ವರ್ಷ ಪೂರೈಸಿದೆ, ಇನ್ನೂ 20 ವರ್ಷ ಬಾಕಿ ಇದೆ, ದೇಶದ ಜನರ ನಿರ್ಧಾರಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ’ ಎಂದರು.
ಪ್ರಧಾನಮಂತ್ರಿಯವರು ರಾಜ್ಯಸಭೆಯಲ್ಲಿ ಭಾಷಣದ ಮಾಡುವ ವೇಳೆ, ಲೋಕಸಭೆಯಲ್ಲಿ ಮಾಡಿದದಂತೆ ಪ್ರತಿಪಕ್ಷದ ಸಂಸದರು ನಿರಂತರ ಘೋಷಣೆಗಳನ್ನು ಕೂಗಿ ವಿರೋಧ ಪಕ್ಷದ ನಾಯಕ ಮಾತನಾಡಲಿ ಎಂದು ಗದ್ದಲ ಉಂಟು ಮಾಡಿದರು.
‘‘ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತೇವೆ ಎಂದು ಲೋಕಸಭೆಯಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.ಈಗ ಸಂವಿಧಾನದ ಪ್ರತಿಯನ್ನು ಹಿಡಿದು ಕುಣಿಯುತ್ತಿರುವವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನುವುದು ನನಗೆ ಆಶ್ಚರ್ಯ ತಂದಿದೆ” ಎಂದರು.
‘ನಾವು ಸಂವಿಧಾನವನ್ನು ರಕ್ಷಿಸಬಹುದು ಎಂದು ತಿಳಿದಿರುವ ಮಾತ್ರಕ್ಕೆ ಜನರು ಎನ್‌ಡಿಎಗೆ ಮತ ಹಾಕಿದ್ದಾರೆ’ಎಂದು ಪ್ರಧಾನಿ ಹೇಳಿದರು.