ಡೆಹ್ರಾಡೂನ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉತ್ತರಾಖಂಡ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾನಾ ಬಳಿ 11,300 ಅಡಿ ಎತ್ತರದಲ್ಲಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಡಿಟ್ಯಾಚ್‌ಮೆಂಟ್ ನಲ್ಲಿ ಸಣ್ಣ ತಾತ್ಕಾಲಿಕ ಶೆಡ್ ನಲ್ಲಿ ಒಂದು ರಾತ್ರಿ ಕಳೆದರು.
ಪೂರ್ವ ನಿಗದಿಯಲ್ಲದ ಕಾರ್ಯಕ್ರಮವಲ್ಲದೆ, ಮೋದಿ ಅವರು ರಸ್ತೆ ನಿರ್ಮಾಣ ಕಾರ್ಮಿಕರೊಂದಿಗೆ ಕಾಲ ಕಳೆಯಲು ನಿರ್ಧರಿಸಿದರು. ಅಲ್ಲದೆ ಅವರಲ್ಲಿ ಒಬ್ಬರಿಗೆ ಕಿಚಡಿ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸರಳವಾದ ಖಿಚಡಿ, ಮಂಡ್ವೆ ರೊಟ್ಟಿ, ಸ್ಥಳೀಯ ಚಟ್ನಿ ಮತ್ತು ಬಿಆರ್ ಓ ನಲ್ಲಿ ಕೆಲಸ ಮಾಡುವ ಕಾರ್ಮಿಕರು ಬೇಯಿಸಿದ ಖೀರ್ ಸೇವಿಸಿದರು.
ಇದನ್ನೂ ಓದಿ:ಭಾರತ- ಪಾಕ್ ಕದನ: ಇಬ್ಬರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿದ ರೋಹಿತ್
“ಪ್ರಧಾನಿ ಅವರಿಗಾಗಿ ಯಾವುದೇ ವಿಶೇಷ ವಸ್ತುಗಳನ್ನು ತಂದಿಲ್ಲ, ಅವರು ಡಿಇಟಿ ಅಡುಗೆ ಮನೆಯಲ್ಲಿದ್ದ ಅದೇ ರೇಶನ್ ಸೇವಿಸಿದರು. ಸ್ಥಳೀಯಾಡಳಿತವು ಬದರಿನಾಥ್ ನಲ್ಲಿ ಪ್ರಧಾನಿಯರಿಗೆ ವ್ಯವಸ್ಥೆ ಮಾಡಿದ್ದರೂ, ಪ್ರಧಾನ ಮಂತ್ರಿ ಮತ್ತು ಅವರ ವೈಯಕ್ತಿಕ ಸಿಬ್ಬಂದಿ ಡಿಇಟಿಯಲ್ಲಿಯೇ ತಂಗಿದ್ದರು. ಡಿಇಟಿ ರಸ್ತೆ ನಿರ್ಮಾಣ ಕಾರ್ಮಿಕರು ಸಿದ್ದಪಡಿಸಿದ ಆಹಾರವನ್ನು ಸೇವಿಸಿದರು” ಎಂದು ಅಧಿಕಾರಿಯೊಬ್ಬರು ತಿಳಿಸಿದರು.
11,300 ಅಡಿ ಎತ್ತರದಲ್ಲಿ, ರಾತ್ರಿಯಲ್ಲಿ ಶೂನ್ಯ ತಾಪಮಾನದಲ್ಲಿ ಕೊಠಡಿಯನ್ನು ಬೆಚ್ಚಗಾಗಲು ಸಣ್ಣ ಎಲೆಕ್ಟ್ರಿಕ್ ಹೀಟರ್ ಹೊಂದಿರುವ ಸರಳ ಕೋಣೆಯಲ್ಲಿ ಪ್ರಧಾನಿ ಮೋದಿ ತಂಗಿದ್ದರು.