Advertisement

ಸುರಂಗ ಕಾರ್ಯಾಚರಣೆ ಯಶಸ್ವಿ: 41 ಕಾರ್ಮಿಕರೊಂದಿಗೆ ಮಾತನಾಡಿ ಅರೋಗ್ಯ ವಿಚಾರಿಸಿದ ಪ್ರಧಾನಿ

09:10 AM Nov 29, 2023 | Team Udayavani |

ನವದೆಹಲಿ: 17 ದಿನಗಳ ಕಾಲ ನಡೆದ ಮ್ಯಾರಥಾನ್ ರಕ್ಷಣಾ ಕಾರ್ಯಾಚರಣೆಯ ನಂತರ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಡರಾತ್ರಿ ದೂರವಾಣಿ ಮೂಲಕ ಮಾತನಾಡಿ ಅರೋಗ್ಯ ವಿಚಾರಿಸಿದರು.

Advertisement

ಸುಮಾರು ಹದಿನೇಳು ದಿನಗಳ ನಿರಂತರ ಕಾರ್ಯಾಚರಣೆಯ ಭಾಗವಾಗಿ ಎಲ್ಲಾ ನಲ್ವತ್ತೊಂದು ಕಾರ್ಮಿಕರನ್ನು ಮಂಗಳವಾರ ಸಂಜೆ ಸುರಕ್ಷಿತವಾಗಿ ಹೊರತರಲಾಯಿತು. ರಕ್ಷಣಾ ಕಾರ್ಯ ಯಶಸ್ವಿಯಾಗುತ್ತಿದ್ದಂತೆ ಟ್ವಿಟ್ ‘x’ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ”ನಿಮ್ಮ ಧೈರ್ಯ ಹಾಗೂ ತಾಳ್ಮೆ ಎಲ್ಲರಿಗೂ ಸ್ಫೂರ್ತಿ, ನೀವೆಲ್ಲರೂ ದೀರ್ಘಕಾಲ ಆರೋಗ್ಯವಾಗಿರಿ. ದೀರ್ಘಾವಧಿಯ ಕಾಯುವಿಕೆಯ ಬಳಿಕ ನೀವು ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗಿರುವುದು ತುಂಬಾ ಸಂತಸದ ಸಂಗತಿ” ಎಂದು ಬರೆದಿದ್ದಾರೆ.

ಎಲ್ಲಾ ರಕ್ಷಣಾ ಕಾರ್ಯ ಮುಗಿದ ಬಳಿಕ ಎಲ್ಲ ಕಾರ್ಮಿಕರ ಜೊತೆ ಫೋನ್ ಮೂಲಕ ಎಲ್ಲರ ಜೊತೆ ಮರನಾಡಿಯೂ ಧೈರ್ಯ ತುಂಬಿದ್ದಾರೆ, ಅಲ್ಲದೆ ಸುಮಾರು ಹದಿನೇಳು ದಿನಗಳ ಕಾಲ ಸುರಂಗದೊಳಗೆ ಇದ್ದ ಕಾರ್ಮಿಕರ ಮನಸ್ಥೈರ್ಯಕ್ಕೆ ಪ್ರಧಾನಿ ಅಭಾರಿಯಾಗಿದ್ದರೆ. ಇದರ ಜೊತೆಗೆ ರಕ್ಷಣಾ ತಂಡಕ್ಕೂ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ನಿರಂತರ ಹದಿನೇಳು ದಿನಗಳ ಕಾರ್ಯಾಚರಣೆ ನಡೆಸಿ ಕಾರ್ಮಿಕರ ರಕ್ಷಣೆಯ ಕಾರ್ಯವನ್ನು ಸುಲಲಿತವಾಗಿ ಸಂಪೂರ್ಣಗೊಳಿಸಿದ ಎಲ್ಲ ರಕ್ಷಣಾ ಸಿಬ್ಬಂದಿಗೂ ಧನ್ಯವಾದಗಳನ್ನು ಹೇಳಿದ್ದಾರೆ.

ಈ ನಡುವೆ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ 1 ಲಕ್ಷ ರೂ. ನೆರವು ಘೋಷಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಜನರಲ್ (ನಿವೃತ್ತ) ವಿಕೆ ಸಿಂಗ್ ಅವರು 41 ಕಾರ್ಮಿಕರಿಗೆ ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: Cyber Crime: ಸೈಬರ್‌ ವಂಚಕರಿಗೆ ವಿವರ ನೀಡುತ್ತಿದ್ದ ನಾಲ್ವರ ಸೆರೆ

Advertisement

Advertisement

Udayavani is now on Telegram. Click here to join our channel and stay updated with the latest news.

Next