Advertisement

ಇನ್ನೊಂದು ಅವಧಿಗೂ ಪಿಎಂ ಮೋದಿ ಮುಂದುವರಿಯಲಿ

06:56 AM Nov 15, 2018 | |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರಕಾರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಅವರು ಮತ್ತೂಂದು ಅವಧಿಗೆ ಮುಂದುವರಿದರೆ ದೇಶಕ್ಕೆ ಅನುಕೂಲಕರ ಎಂದು ಇನ್ಫೋಸಿಸ್‌ನ ಸಹಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಹೇಳಿದ್ದಾರೆ. ಇಟಿ ನೌ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿ ರುವ ನಾರಾಯಣಮೂರ್ತಿ, ಕೇಂದ್ರದ ಮಟ್ಟದಲ್ಲಿ ಭ್ರಷ್ಟಾಚಾರದ  ಕೇಳಿಬಂದಿದ್ದು ಅಪರೂಪ. ರಫೇಲ್‌ ಡೀಲ್‌ ವಿಚಾರದಲ್ಲಿ ಮಾಹಿತಿ ಲಭ್ಯ ವಾಗದ ಹೊರತು ಸತ್ಯ ಏನೆಂದು ಹೇಳಲಾಗದು. ಜಿಎಸ್‌ಟಿಯಂತಹ ಯೋಜನೆಯ ಜಾರಿ ಬಗ್ಗೆ ನಾವು ಪ್ರಧಾನಿಯನ್ನು ದೂರಲಾಗದು ಎಂದಿದ್ದಾರೆ. ಆರ್‌ಬಿಐ, ಸಿಬಿಐ ಇತ್ಯಾದಿ ಸಂಸ್ಥೆಗಳ ಜೊತೆಗೆ ಕೇಂದ್ರ ಸರಕಾರ ಸಂಘರ್ಷ ಎದುರಿಸಿದ ಬಗ್ಗೆ ಮಾತನಾಡಿದ ಮೂರ್ತಿ, ಎರಡೂ ವರ್ಗದ ಜನರನ್ನು ನಾನು ಅರಿತಿದ್ದೇನೆ ಎಂದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next