Advertisement

ಕಾರ್ಮಿಕರಿಗೆ ಪಾದರಕ್ಷೆ ಉಡುಗೊರೆ ಕೊಟ್ಟಿದ್ದು ಯಾರು ಗೊತ್ತಾ?

12:02 AM Jan 11, 2022 | Team Udayavani |

ಹೊಸದಿಲ್ಲಿ: ಕಾಶಿಯಲ್ಲಿರುವ ವಿಶ್ವನಾಥ ದೇಗುಲದ ಅರ್ಚಕ ವೃಂದ ಮತ್ತು ಇತರ ಸಿಬಂದಿಗೆ ವಿಶೇಷ ವ್ಯಕ್ತಿಯಿಂದ “ಚಳಿಗಾಲದ ಉಡುಗೊರೆ’ ಸಿಕ್ಕಿದೆ.

Advertisement

ಈ ಉಡುಗೊರೆ ಕೊಟ್ಟಿದ್ದು ಯಾರು ಗೊತ್ತಾ?. ವಾರಾಣಸಿ ಕ್ಷೇತ್ರದ ಲೋಕಸಭಾ ಸದಸ್ಯರೂ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರು. ನಡುಗುವ ಚಳಿಯಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಅರ್ಚಕರು ಮತ್ತು ಇತರ ಸಿಬಂದಿಗೆ 100 ಜತೆ ಸೆಣಬಿನ ಪಾದರಕ್ಷೆಗಳನ್ನು ಪ್ರಧಾನಿ ಮೋದಿಯವರು ವಿಶೇಷ ಆಸ್ಥೆಯಿಂದ ಕಳುಹಿಸಿ ಕೊಟ್ಟಿದ್ದಾರೆ. ಚಳಿಗೆ ಬರಿಗಾಲಿನಲ್ಲಿ ನಡೆಯುವ ಪರಿಸ್ಥಿತಿಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ದೇವರಿಗೇ ಪೊಲೀಸ್‌ ಸಮವಸ್ತ್ರ! ಕಾಶಿಯ ಕೊತ್ವಾಲ ಬಾಬಾ ಕಾಲ ಭೈರವನಿಗೆ ಖಾಕಿ ಸಮವಸ್ತ್ರ

ಇತ್ತೀಚೆಗೆ ದೇಗುಲದ ಆವರಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿಯವರು, ಹಲವು ಸಿಬಂದಿ ಕೊರೆಯುತ್ತಿರುವ ಚಳಿಗೆ ಬರಿಗಾಲಿನಲ್ಲಿ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ಚರ್ಮ ಅಥವಾ ರಬ್ಬರ್‌ ಪಾದರಕ್ಷೆಯನ್ನು ದೇಗುಲದ ಆವರಣದಲ್ಲಿ ಬಳಕೆ ನಿಷೇಧಿತವಾಗಿರುವ ಹಿನ್ನೆಲೆಯಲ್ಲಿ ಸೆಣಬಿನಿಂದ ತಯಾರಿ ಸಿದ ಪಾದರಕ್ಷೆಯನ್ನು ಅರ್ಚಕರು, ಭದ್ರತಾ ಸಿಬಂದಿ, ಶುಚಿ ಗೊಳಿಸುವ ಕೆಲಸದಲ್ಲಿ ತೊಡಗಿರುವವರು ಮತ್ತು ಇತರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳುಹಿಸಿಕೊಟ್ಟಿದ್ದಾರೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next