Advertisement

ಕೋವಿಡ್ ಲಸಿಕೆಯನ್ನು ಸಂಶೋಧನೆ ಮಾಡಿದ ವಿಜ್ಞಾನಿಗಳ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ : ಪ್ರಧಾನಿ

04:25 PM May 26, 2021 | Team Udayavani |

ನವ ದೆಹಲಿ : ಕೋವಿಡ್ ದುರಂತ ಮತ್ತು ಸಂಕಟಗಳನ್ನು ಅನೇಕರ ಮನೆ ಬಾಗಿಲಿಗೆ ತಂದಿದೆ ಮತ್ತು ಭಾರಿ ಆರ್ಥಿಕ ಪರಿಣಾಮವನ್ನು ಉಂಟುಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಮಂಗಳವಾರ, ಮೇ. 26) ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಬುದ್ಧ ಪೂರ್ಣಿಮೆಯ ಅಂಗವಾಗಿ ನಡೆದ ವೈಶಾಖ್ ಪೂರ್ಣಿಮಾ(ವೈಶಾಕ್ ಗ್ಲೋಬಲ್ ಸೆಲೆಬ್ರೆಷನ್)  ಸಂದರ್ಭದಲ್ಲಿ  ದಿಕ್ಸೂಚಿ ಭಾಷಣ ಮಾಡಿದ ಪ್ರಧಾನಿ ಮೋದಿ, ಸಾಂಕ್ರಾಮಿಕ ರೋಗವು ಪ್ರತಿ ರಾಷ್ಟ್ರದ ಮೇಲೆ ಪರಿಣಾಮ ಬೀರಿದೆ ಆದರೆ ಅದರ ವಿರುದ್ಧ ಹೋರಾಡುವ ನಮ್ಮ ಕಾರ್ಯತಂತ್ರವನ್ನು ಬಲಪಡಿಸುವ ಅನೇಕ ಗಮನಾರ್ಹ ಬೆಳವಣಿಗೆಗಳು ನಡೆದಿವೆ ಎಂದಿದ್ದಾರೆ.

ಇದನ್ನೂ ಓದಿ :  ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಕೋವಿಡ್ ವಾರಿಯರ್ಸ್: ಮುಖ್ಯಮಂತ್ರಿ ಘೋಷಣೆ

ಸದ್ಯ ಭಾರತದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕೊಂಚ ಇಳಿದಿದೆ. ಆದರೇ, ಸಾವಿನ ಪ್ರಮಾಣ  ನಾಲ್ಕು ಸಾವಿರದಷ್ಟಿರುವುದು ಆತಂಕಕಾರಿ ವಿಚಾರ.

ಬಹು ಮುಖ್ಯವಾಗಿ, ನಮ್ಮಲ್ಲಿ ಲಸಿಕೆ ಇದೆ, ಇದು ಜೀವಗಳನ್ನು ಉಳಿಸಲು ಮತ್ತು ಸಾಂಕ್ರಾಮಿಕ ರೋಗವನ್ನು ಮಣಿಸಲು ಸಂಪೂರ್ಣವಾಗಿ ಸಹಾಯ ಮಾಡುತ್ತದೆ. ಆ್ಯಂಟಿ ಕೋವಿಡ್ ಲಸಿಕೆಯನ್ನು ಸಂಶೋಧನೆ ಮಾಡಿದ ವಿಜ್ಞಾನಿಗಳ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ.

Advertisement

ಈ ಕೋವಿಡ್ ಕಾರಣದಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಕೋವಿಡ್ ಇಡೀ ಜಗತ್ತನ್ನು ಬದಲಿಸಿದೆ. ಈ ಕಷ್ಟದ ಸಮಯದಲ್ಲಿ ಬುದ್ಧನ ಆದರ್ಶಗಳನ್ನು ಅನುಸರಿಸುವುದು ಅವಶ್ಯಕ . ಕೋವಿಡ್ ವಿರುದ್ಧದ ಯುದ್ಧದಲ್ಲಿ ನಾವು ಬೌದ್ಧ ಸಂಘಟನೆಗಳ ಬೆಂಬಲವನ್ನು ಪಡೆಯುತ್ತಿದ್ದೇವೆ.

ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ (ಐಬಿಸಿ) ಸಹಯೋಗದೊಂದಿಗೆ ಆಯೋಜಿಸಿದೆ ಎಂದು ನಾನು ನಿಮಗೆ ಹೇಳುತ್ತೇನೆ.  ಇದು ವಿಶ್ವದಾದ್ಯಂತ ಬೌದ್ಧ ಸಂಘಗಳ ಸರ್ವೋಚ್ಚ ಮುಖ್ಯಸ್ಥರನ್ನು ಒಳಗೊಂಡಿರುತ್ತದೆ . ಭಗವಾನ್ ಬುದ್ಧನು ಶಾಂತಿ ಮತ್ತು ಪ್ರೀತಿಯ ಹಾದಿಯಲ್ಲಿ ನಡೆಯಲು ಸಂದೇಶವನ್ನು ಕೊಟ್ಟಿದ್ದಾನೆ ಎಂದು ಪ್ರಧಾನಿ ಹೇಳಿದ್ದಾರೆ.

ಇನ್ನು, ಹವಾಮಾನ ಬದಲಾವಣೆಯ ಬಗ್ಗೆ ಉಲ್ಲೇಖಿಸಿದ ಮೋದಿ, ನಾಗರಿಕ ಸಮಾಜದಲ್ಲಿ ಅನೇಕ ದೊಡ್ಡ ಅವುಗಳಲ್ಲಿ ಹವಾಮಾನ ಬದಲಾವಣೆ ಕೂಡ ಬಹಳ ಮುಖ್ಯ, ಪ್ಯಾರಿಸ್ ಒಪ್ಪಂದಗಳ ನಿಯಮಗಳನ್ನು ಪೂರೈಸುವಲ್ಲಿ ನಿರತರಾಗಿರುವ ದೇಶಗಳಲ್ಲಿ ಭಾರತವೂ ಒಂದು ಎಂದಿದ್ದಾರೆ.

ಇದನ್ನೂ ಓದಿ :  ಕೋವಿಡ್ ತಡೆಗೆ ವ್ಯಾಕ್ಸಿನೆಷನ್  ಮಾಡುವುದೊಂದೇ ಶಾಶ್ವತ ಪರಿಹಾರ : ಎಂ.ಬಿ.ಪಾಟೀಲ 

Advertisement

Udayavani is now on Telegram. Click here to join our channel and stay updated with the latest news.

Next