ನವ ದೆಹಲಿ : ಕೋವಿಡ್ 19 ಸಂದರ್ಭದಲ್ಲಿ ಭಾರತ ಹಾಗೂ ಜಪಾನ್ ನ ಸಂಬಂಧವು ಜಾಗತಿಕ ಸ್ಥಿರತೆ ಹಾಗೂ ಸಮೃದ್ಧಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು(ಭಾನುವಾರ, ಜೂನ್ 27) ಹೇಳಿದ್ದಾರೆ.
ಅಹಮದಾಬಾದ್ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ನ ಆವರಣದಲ್ಲಿ ಸ್ಥಾಪಿಸಲಾಗಿರುವ ಜಪಾನಿನ ಜೆನ್ ಗಾರ್ಡನ್ ಮತ್ತು ಕೈಜೆನ್ ಅಕಾಡೆಮಿಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಸಿದ ಮೋದಿ, ಜಪಾನ್ ನ ಈಗಿನ ಪ್ರಧಾನ ಮಂತ್ರಿ ಯೋಶಿಹಿದೆ ಸುಗಾ, ನೇರಾ ನೇರಾ ವ್ಯಕ್ತಿತ್ವದವರು. ಕೋವಿಡ್ 19 ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂಡೋ ಜಪಾನ್ ನ ಸಂಬಂಧ ಜಾಗತಿಕ ಸ್ಥಿರತೆ ಹಾಗೂ ಸಮೃದ್ಧಿಗೆ ಪೂರಕವಾಗಿರಲಿದೆ ಎಂದು ನಾನು ಹಾಗೂ ಸುಗಾ ನಂಬುತ್ತೇವೆ. ಜಾಗತಿಕವಾಗಿ ಹಲವಾರು ಸವಾಲುಗಳನ್ನು ನಾವೆಲ್ಲಾ ಇಂದು ಎದುರಿಸುತ್ತಿದ್ದೇವೆ. ನಮ್ಮ ಸ್ನೇಹ ಸಂಬಂಧಗಳನ್ನು ಇನ್ನಷ್ಟು ಭದ್ರಗೊಳಿಸಿಕೊಳ್ಳಲು ಸರಿಯಾದ ಸಮಯ ಎಂದು ನಾನು ಭಾವಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ ದುರಂತಕ್ಕೆ ಎಲ್ಲಾ ಸಚಿವರ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು: ಡಿಕೆ ಶಿವಕುಮಾರ್
ಕೈಜೆನ್ ಅಕಾಡೆಮಿಯು ಜಪಾನ್ ನ ಸಂಸ್ಕೃತಿಯನ್ನು ಭಾರತದಲ್ಲಿ ಪ್ರತಿನಿಧಿಸಲಿ. ಭಾರತ ಹಾಗ್ಊ ಜಪಾನ್ ನ ನಡುವಿನ ೆಲ್ಲಾ ವ್ಯಾಪಾರ ವಹಿವಾಟುಗಳು ಹೆಚ್ಚಾಗುವಂತೆ ಮಾಡಲಿ. ನಾವು ಕೂಡು ಸರ್ಕಾರದ ಮಟ್ಟಿನಲ್ಲಿ ಏನೆಲ್ಲಾ ಆಗಬೇಕೋ ಅದಕ್ಕೆ ಬೆಂಬಲವಾಗಿರುವುದಕ್ಕೆ ನಾವು ಪ್ರಾಮಾಣುಕವಾಗಿ ಪ್ರಯತ್ನ ಪಡುತ್ತೇವೆ. ಭಾರತ ಹಾಗೂ ಜಪಾನ್ ಒಟ್ಟಾಗಿ ಖಂಡಿತವಾಗಿ ಉನ್ನತ ಅಭಿವೃದ್ಧಿಯನ್ನು ನಾವು ಮುಟ್ಟಲಿದ್ದೇವೆ ಎನ್ನುವ ನಂಬಿಕೆ ನನಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಗುಜರಾತ್ ಭೇಟಿಯನ್ನು ಮೋದಿ ಉಲ್ಲೇಖಿಸಿದ್ದು, ಅವರು ಮಾತನಾಡುವಾಗಲೆಲ್ಲಾ ಪ್ರವಾಸವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೇಂದ್ರ ಹಾಗೂ ರಾಜ್ಯಗಳು ಎಂಎಸ್ಎಂಇ ಗೆ ನೀಡಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ: ಶೆಟ್ಟರ್