Advertisement

ಭಾರತದ ಆರ್ಥಿಕ ತಳಹದಿ ಭದ್ರವಾಗಿದೆ-ಮತ್ತೆ ಅಭಿವೃದ್ಧಿ ಹಳಿಗೆ ಮರಳಲಿದೆ; ಪ್ರಧಾನಿ ಮೋದಿ

10:11 AM Jan 10, 2020 | Nagendra Trasi |

ನವದೆಹಲಿ: ಕಳೆದ ಹನ್ನೊಂದು ವರ್ಷಗಳಲ್ಲಿ ದೇಶದ ಜಿಡಿಪಿ ಭಾರೀ ಕುಸಿತ ಕಂಡಿದೆ ಎಂಬ ಟೀಕೆಯ ಬೆನ್ನಲ್ಲೇ ಭಾರತದ ಆರ್ಥಿಕ ಮೂಲಸೂತ್ರ ಭದ್ರವಾಗಿದೆ. ಅಲ್ಲದೇ ದೇಶದ ಆರ್ಥಿಕ ಸ್ಥಿತಿ ಚೇತರಿಕೆ ಕಾಣುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಅಭಿವೃದ್ದಿಗೆ ತೊಡಕಾಗಿರುವ ಅಂಶಗಳ ಕುರಿತು ಹಾಗೂ ಆರ್ಥಿಕ ಅಭಿವೃದ್ಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಕಳೆದ ಕೆಲವು ದಿನಗಳಲ್ಲಿ ಹಲವು ಸಭೆಗಳನ್ನು ನಡೆಸಿರುವುದಾಗಿ ವರದಿ ವಿವರಿಸಿದೆ.

ಗುರುವಾರ ಪ್ರಧಾನಿ ಮೋದಿ ಅವರು ಆರ್ಥಿಕ ತಜ್ಞರು, ಖಾಸಗಿ ಈಕ್ವಿಟಿ ಮತ್ತು ಹೂಡಿಕೆದಾರರು, ಉದ್ಯಮಿಗಳು, ನೀತಿ ಆಯೋಗದ ಪರಿಣತರ ಜತೆ ಮಹತ್ವದ ಮಾತುಕತೆ ನಡೆಸಿದ್ದು, 2024ರೊಳಗೆ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗೆ ತಲುಪಿಸುವ ಬಗ್ಗೆ ಸಮಾಲೋಚನೆ ನಡೆಸಿರುವುದಾಗಿ ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

ನಾವು ಎಲ್ಲರು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ದೇಶದ ಆರ್ಥಿಕ ಅಭಿವೃದ್ದಿ ಕುರಿತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿರುವುದಾಗಿ ಪ್ರಕಟಣೆ ತಿಳಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next