ನವದೆಹಲಿ: ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಲಿರುವ ಐತಿಹಾಸಿಕ ಜಿ 20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಸೆಪ್ಟೆಂಬರ್ 9-10ರಂದು ರಾಷ್ಟ್ರರಾಜಧಾನಿಯಲ್ಲಿ ನಡೆಯಲಿರುವ ಜಿ 20 ಶೃಂಗದಲ್ಲಿ ಭಾಗವಹಿಸಲು ಬ್ರಿಟನ್ ಪ್ರಧಾನಮಂತ್ರಿ ರಿಷಿ ಸುನಾಕ್, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೇರಿದಂತೆ ಜಗತ್ತಿನ ಗಣ್ಯಾತೀಗಣ್ಯರು ಭಾರತಕ್ಕೆ ಬಂದಿಳಿದಿದ್ದಾರೆ.
ಇದನ್ನೂ ಓದಿ:BJP ಕೋಮುವಾದಿ ಮತೀಯ ಪಕ್ಷ: ತಮ್ಮದೇ ಪಕ್ಷದ ವಿರುದ್ದ ಸಂಸದ ಬಚ್ಚೇಗೌಡ ವಾಗ್ದಾಳಿ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಂಜೆ ನವದೆಹಲಿಗೆ ಆಗಮಿಸಲಿದ್ದು, ಈ ನಿಟ್ಟಿನಲ್ಲಿ ವಾಹನ ಸವಾರರ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ವರದಿ ವಿವರಿಸಿದೆ. ಆನ್ ಲೈನ್ ಔಷಧವನ್ನು ಹೊರತುಪಡಿಸಿ ಬೇರೆ ಯಾವುದೇ ಡೆಲಿವರಿ ಸೇವೆಗೆ ಅವಕಾಶ ಇಲ್ಲ. ಅಲ್ಲದೇ ಜಿ 20 ಗಣ್ಯರು ಉಳಿದುಕೊಳ್ಳುವ ಪಂಚತಾರಾ ಹೋಟೆಲ್, ಶೃಂಗಸಭೆ ನಡೆಯಲಿರುವ ಸ್ಥಳದ 2 ಕಿಲೋ ಮೀಟರ್ ವರೆಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.
ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೈ ಲೂರೌ ನವದೆಹಲಿಗೆ ಬಂದಿಳಿದಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬದಲು ಸೆರ್ಗೈ ಜಿ20 ಶೃಂಗದಲ್ಲಿ ಭಾಗವಹಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗ್ಯುಟೇರಸ್,
ಗುರುವಾರ ರಾತ್ರಿಯಿಂದಲೇ ನವದೆಹಲಿಯಲ್ಲಿ ಸಂಚಾರ ನಿರ್ಬಂಧ ಹೇರಲಾಗಿದ್ದು, ಪೊಲೀಸ್, ಕಮಾಂಡೋ, ಎಸ್ ಪಿಜಿ ಸರ್ಪಗಾವಲು ಹಾಕಲಾಗಿದೆ. ಗುರುವಾರ ರಾತ್ರಿ 9ರಿಂದ ಭಾನುವಾರ ಮಧ್ಯರಾತ್ರಿಯವರೆಗೆ ಸರಕು ವಾಹನಗಳಿಗೆ ದೆಹಲಿ ಪ್ರವೇಶಿಸಲು ಅವಕಾಶವಿಲ್ಲ ಎಂದು ಸೂಚಿಸಲಾಗಿದೆ.