Advertisement
ಸುಮಾರು 9 ಯಾರ್ಡ್‌ನಷ್ಟು ವಿಸ್ತೀರ್ಣದ ಪೈತಾನಿ ಸೀರೆಗಳನ್ನುಟ್ಟ ಮಹಾರಾಷ್ಟ್ರ ಮೂಲದ ಮಹಿಳೆಯರು ಸಾಂಪ್ರದಾಯಿಕವಾದ ಲೆಜಿಮ್ ನೃತ್ಯ ಪ್ರದರ್ಶಿಸಿದರು. ಅನಂತರ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ರಾಮಭಾಗ್ ಮೂಲದ ಭಾರತೀಯರ ತಂಡವೊಂದು “ಡೋಲ್-ತಾಷಾ’ ಕಾರ್ಯಕ್ರಮ ನಡೆಸಿಕೊಟ್ಟಿತು. ಈ ಸಂದರ್ಭದಲ್ಲಿ, ಛತ್ರಪತಿ ಶಿವಾಜಿಯ ವೇಷ ಧರಿಸಿದ್ದ ವ್ಯಕ್ತಿಯೊಬ್ಬ ಡೋಲು ಬಾರಿಸುವವರ ಮಧ್ಯೆ ಆಗಮಿಸಿ ಗಮನ ಸೆಳೆದ. ಇವಿಷ್ಟೇ ಅಲ್ಲದೆ, ಹಲವಾರು ನೃತ್ಯ- ಗಾಯನ ಸ್ಪರ್ಧೆಗಳು ನಡೆದವು.
Related Articles
Advertisement
ಹೊಸ ಒಪ್ಪಂದಕ್ಕೆ ಸಹಿ: ಭಾರತ ಮತ್ತು ಜರ್ಮನಿಯ ಪ್ರಜೆಗಳಿಗೆ ಉಭಯ ದೇಶಗಳಲ್ಲಿ ಸುಲಭವಾಗಿ ಉದ್ಯೋಗ, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ಅಥವಾ ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಗು ವಂಥ ಒಪ್ಪಂದವೊಂದು ಎರಡೂ ದೇಶಗಳ ನಡುವೆ ಏರ್ಪಟ್ಟಿದೆ. ಬರ್ಲಿನ್‌ನಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ, ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿನಯ್ ಕ್ವಾತ್ರಾ, ಜರ್ಮನಿಯ ಗೃಹ ಇಲಾಖೆಯ ಕಾರ್ಯ ದರ್ಶಿ ಮಹಮುತ್ ಒಝೆ¾ಡಿರ್ ಸಹಿ ಹಾಕಿದರು.
ಮೊದಲ ಮ್ಯೂಸಿಕಲ್ ಪ್ರಧಾನಿ: ಬಾಲಿವುಡ್ ಶ್ಲಾಘನೆಸಾಂಸ್ಕೃತಿಕ ಕಾರ್ಯಕ್ರಮದ ಅನಂತರ, ಭಾರತೀಯ ಸಮುದಾ ಯದವರನ್ನು ಮೋದಿ ವೈಯಕ್ತಿಕವಾಗಿ ಭೇಟಿಯಾ ದರು. ಆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಮೋದಿಯವರ ಮುಂದೆ ದೇಶಭಕ್ತಿ ಗೀತಗಾಯನ ಮಾಡಿದರು. ಅವರ ಹಾಡಿಗೆ ಮೋದಿಯವರೂ ದನಿಗೂಡಿಸಿದ್ದು ವಿಶೇಷವಾಗಿತ್ತು. ಇದರ ವೀಡಿಯೋಗಳನ್ನು ಮೋದಿಯವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಹಂಚಿಕೊಂಡಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್, ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಹಾಡಿಗೆ ದನಿಗೂಡಿಸಿದ್ದಕ್ಕಾಗಿ, ದೇಶದ ಮೊದಲ ಸಂಗೀತಮಯ ಪ್ರಧಾನಿ ಎಂದು ಅವರು ಮೋದಿಯವರನ್ನು ಬಣ್ಣಿಸಿದ್ದಾರೆ.