Advertisement

PM Modi 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನ

09:10 PM Dec 14, 2023 | Vishnudas Patil |

ಹೊಸದಿಲ್ಲಿ: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಗುರುತಿಸಿ 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ.

Advertisement

ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು 2018 ರಲ್ಲಿ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಯನ್ನು ಮೋದಿ ಸ್ವೀಕರಿಸೀರುವುದನ್ನು ಉಲ್ಲೇಖಿಸಿ, 2014 ರಿಂದ, ಭಾರತದ ಪ್ರಧಾನ ಮಂತ್ರಿ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ಯುಎನ್‌ನ ಅತ್ಯುನ್ನತ ಪರಿಸರ ಪ್ರಶಸ್ತಿಯನ್ನು ಪಡೆದಿದ್ದಾರೆ” ಎಂದು ಹೇಳಿದರು.

2016 ರಲ್ಲಿ ಅಫ್ಘಾನಿಸ್ಥಾನದ ಸ್ಟೇಟ್ ಆರ್ಡರ್ ಆಫ್ ಘಾಜಿ ಅಮೀರ್ ಅಮಾನುಲ್ಲಾ ಖಾನ್, ಫೆಬ್ರವರಿ 2018 ರಲ್ಲಿ ಪ್ಯಾಲೆಸ್ತೀನ್ ಗ್ರ್ಯಾಂಡ್ ಕಾಲರ್, ಅಕ್ಟೋಬರ್‌ನಲ್ಲಿ ಯುಎನ್ ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿ ,  ಎಪ್ರಿಲ್ 2019 ರಲ್ಲಿ ಯುಎಇಯಿಂದ ಆರ್ಡರ್ ಆಫ್ ಜಾಯೆದ್ ಮತ್ತು  ರಷ್ಯಾದಿಂದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ. ಜೂನ್ 2019 ರಲ್ಲಿ ಮಾಲ್ಡೀವ್ಸ್‌ನಿಂದ ಆರ್ಡರ್ ಆಫ್ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ಇಝುದ್ದೀನ್, 2019 ರ ಆಗಸ್ಟ್‌ನಲ್ಲಿ ಬಹ್ರೇನ್‌ನಿಂದ ಕಿಂಗ್ ಹಮದ್ ಆರ್ಡರ್ ಆಫ್ ದಿ ರೆನೈಸೆನ್ಸ್, ಡಿಸೆಂಬರ್ 2020 ರಲ್ಲಿ ಯುಎಸ್‌ನಿಂದ ಲೀಜನ್ ಆಫ್ ಮೆರಿಟ್, ಡಿಸೆಂಬರ್ 2021 ರಲ್ಲಿ ಭೂತಾನ್‌ನಿಂದ ಆರ್ಡರ್ ಆಫ್ ದಿ ಡ್ರ್ಯಾಗನ್ ಕಿಂಗ್, ಪಾಪುವಾ ನ್ಯೂ ಗಿನಿಯಾದಿಂದ ಲೋಗೊಹು, ಈ ವರ್ಷ ಮೇನಲ್ಲಿ ಫಿಜಿಯಿಂದ ಆರ್ಡರ್ ಆಫ್ ಫಿಜಿ, ಪಾಪುವ ನ್ಯೂ ಗಿನಿಯಾದಿಂದ ಲೋಗೊಹು ಮತ್ತು ಜೂನ್‌ನಲ್ಲಿ ಈಜಿಪ್ಟ್‌ನಿಂದ ಆರ್ಡರ್ ಆಫ್ ದಿ ನೈಲ್ ಸ್ವೀಕರಿಸಿರುವುದನ್ನು ಮುರಳೀಧರನ್ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next